ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾದ ನಟಿ ಯಾಮಿ ಗೌತಮ್ (Yami Gautham) ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಆಗಲು ಅವರು ತಯಾರಿ ನಡೆಸಿದ್ದಾರೆ. ಹೊಸ ಬಾಲಿವುಡ್ ಸಿನಿಮಾ ಮೂಲಕ ಯಾಮಿ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.
‘ಗಿನ್ನಿ ವೆಡ್ಸ್ ಸನ್ನಿ ಪಾರ್ಟ್ 2’ (Ginny Weds Sunny 2) ಚಿತ್ರಕ್ಕೆ ಯಾಮಿ ಗೌತಮ್ ನಾಯಕಿಯಾಗಿ ನಟಿಸಲಿದ್ದಾರೆ. ವಿಕ್ರಾಂತ್ ಮಾಸ್ಸಿಗೆ ಅವರು ಜೊತೆಯಾಗಲಿದ್ದಾರೆ. ಸದ್ಯದಲ್ಲೇ ಪ್ರಿ-ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಇದೊಂದು ರೊಮ್ಯಾಂಟಿಕ್ ಮತ್ತು ಕಾಮಿಡಿ ಒಳಗೊಂಡ ಸಿನಿಮಾ ಆಗಿರಲಿದೆ. ಸದ್ಯದಲ್ಲೇ ಶೂಟಿಂಗ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
ಇನ್ನೂ ಈ ಹಿಂದೆ ‘ಗಿನ್ನಿ ವೆಡ್ಸ್ ಸನ್ನಿ’ ಸಿನಿಮಾ 2010ರಲ್ಲಿ ತೆರೆ ಕಂಡಿತ್ತು. ಅದರಲ್ಲಿ ವಿಕ್ರಾಂತ್ ಮತ್ತು ಯಾಮಿ ಜೊತೆಯಾಗಿ ನಟಿಸಿದ್ದರು. ಇದೀಗ ಅದೇ ಟೈಟಲ್ ಜೊತೆ ಹೊಸ ಬಗೆಯ ಕಥೆ ಹೇಳಲು ನಿರ್ದೇಶಕರು ಹೊರಟಿದ್ದಾರೆ.
ಇನ್ನೂ ಯಾಮಿ ಗೌತಮ್ ಅವರು ನಿರ್ದೇಶಕ ಆದಿತ್ಯಾ ಧರ್ ಜೊತೆ 2021ರಲ್ಲಿ ಮದುವೆಯಾದರು. ಕಳೆದ ವರ್ಷ ಮೇನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.