ಬಾಲಿವುಡ್ ನಟಿ ಯಾಮಿ ಗೌತಮ್ (Yami Gautam) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿರುವ ಸಂಭ್ರಮದ ನಡುವೆ ಪತಿ ಆದಿತ್ಯಾ ಧರ್ (Aditya Dhar) ಹುಟ್ಟುಹಬ್ಬಕ್ಕೆ ಸ್ವೀಟ್ ಆಗಿ ಯಾಮಿ ವಿಶ್ ಮಾಡಿದ್ದಾರೆ. ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಪತಿಯನ್ನು ಯಾಮಿ ಹಾಡಿ ಹೊಗಳಿದ್ದಾರೆ.

View this post on Instagram
ಯಾಮಿ ಪತಿಗೆ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಶೇರ್ ಮಾಡಿರುವ ಫೋಟೋದಲ್ಲಿ ಯಾಮಿ ಮುಖದಲ್ಲಿ ತಾಯ್ತನ ಕಳೆ ನೋಡಿ ಅಭಿಮಾನಿಗಳು ಶುಭಹಾರೈಸಿದ್ದಾರೆ. ನಟಿಯ ಬೇಬಿ ಬಂಪ್ ಲುಕ್ ನೋಡಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಕೆರೆಬೇಟೆ’ಯಲ್ಲಿ ಕಾಮಿಡಿ ಕಿಲಾಡಿ ರಾಕೇಶ್ ಕಚಗುಳಿ
ಆದಿತ್ಯಾ ಧರ್ ನಿರ್ದೇಶನ, ಯಾಮಿ ಗೌತಮ್ ನಟನೆಯ ‘ಆರ್ಟಿಕಲ್ 370’ (Article 370) ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೆ, ಯಾಮಿ ಗೌತಮ್ ಈ ಹಿಂದೆ ಕನ್ನಡದ ‘ಉಲ್ಲಾಸ ಉತ್ಸಾಹ’ (Ullasa Utsava) ಸಿನಿಮಾದಲ್ಲಿ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದರು.
