ಕನ್ನಡದ ‘ಉಲ್ಲಾಸ ಉತ್ಸಾಹ’ (Ullasa Utsaha) ಚಿತ್ರದ ಮೂಲಕ ಪರಿಚಿತರಾದ ಬಾಲಿವುಡ್ ನಟಿ ಯಾಮಿ ಗೌತಮ್ (Yami Gautam) ಅಕ್ಷಯ ತೃತೀಯದಂದು (ಮೇ 10) ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಈಗ ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗುವಿಗೆ ನಾಮಕರಣ ಮಾಡಿ ಭಿನ್ನವಾಗಿರುವ ಹೆಸರನ್ನಿಟ್ಟಿದ್ದಾರೆ.

View this post on Instagram
ಪೋಷಕರಾಗಿ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ. ಅವನು ಸಾಧಿಸುವ ಪ್ರತಿ ಮೈಲಿಗಲ್ಲು, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದಾರಿದೀಪವಾಗಿ ಬೆಳೆಯುತ್ತಾನೆ ಎಂಬ ಭರವಸೆ ಮತ್ತು ನಂಬಿಕೆಯಿಂದ ನಾವಿದ್ದೇವೆ ಎಂದು ಯಾಮಿ ಬರೆದುಕೊಂಡಿದ್ದಾರೆ. ನಮ್ಮ ಮಗನ ಆಗಮನದ ವಿಚಾರವನ್ನು ಹಂಚಿಕೊಳ್ಳಲು ಬಹಳ ಥ್ರಿಲ್ ಆಗುತ್ತಿದೆ. ‘ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ಬೇಕು ಎಂದು ನಟಿ ಯಾಮಿ ಪೋಸ್ಟ್ ಮಾಡಿದ್ದಾರೆ.
‘ವೇದವಿದ್’ ಅಂದರೆ ವೇದಗಳಲ್ಲಿ ಪಾರಂಗತನಾದವನು ಎನ್ನುವ ಅರ್ಥವಿದೆ. ಅಂದಹಾಗೆ, ಪೋಷಕರಾಗಿರುವ ಯಾಮಿ ಮತ್ತು ಆದಿತ್ಯಾ ದಂಪತಿಗೆ ಹೃತಿಕ್ ರೋಷನ್, ರಾಶಿ ಖನ್ನಾ, ರಣ್‌ವೀರ್ ಸಿಂಗ್, ಪ್ರಿಯಾಮಣಿ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

