ಬಾಲಿವುಡ್ ನಟ ಇಮ್ರಾನ್ ಹಾಶ್ಮಿ (Emraan Hashmi) ಅವರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನೈಜ ಕಥೆ ಆಧರಿಸಿದ ಶಾ ಬಾನೋ ಕುರಿತಾದ (Shah Bano) ಸಿನಿಮಾದಲ್ಲಿ ನಟಿಸಲು ಇಮ್ರಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್
ಅಹ್ಮದ್ ಖಾನ್ ಜೊತೆ ಕಾನೂನು ಹೋರಾಟ ನಡೆಸಿ ಜೀವನಾಂಶ ಪಡೆದ ಶಾ ಬಾನೋ ಕಥೆಯನ್ನು ಸಿನಿಮಾ ರೂಪದಲ್ಲಿ ತರಲು ಸಜ್ಜಾಗಿದ್ದಾರೆ. ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಗೆದ್ದ ಶಾ ಬಾನೋ ಕಥೆಯನ್ನೇ ಸಿನಿಮಾ ಮಾಡಲಿದ್ದಾರೆ. ಪ್ರಮುಖ ಪಾತ್ರಕ್ಕೆ ನಟಿ ಯಾಮಿ ಗೌತಮ್ (Yami Gautam) ಜೀವ ತುಂಬಲಿದ್ದಾರೆ. ಅಹ್ಮದ್ ಖಾನ್ ಪಾತ್ರದಲ್ಲಿ ನಟಿಸುವ ಇಮ್ರಾನ್ ಹಾಶ್ಮಿಗೆ ಪತ್ನಿಯಾಗಿ ಯಾಮಿ ನಟಿಸಲಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ
ಈ ಸಿನಿಮಾಗೆ ಸುಪರ್ಣ್ ಎಸ್. ವರ್ಮಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.