ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಉಲ್ಲಾಸ ಉತ್ಸಾಹ’ (Ullasa Utsaha) ಚಿತ್ರದಲ್ಲಿ ನಟಿಸಿದ್ದ ಯಾಮಿ ಗೌತಮ್ (Yami Goutham) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಯಾಮಿ ಅವರು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಫೆ.23ರಂದು ರಿಲೀಸ್‌ಗೆ ರೆಡಿಯಾಗಿರುವ ‘ಆರ್ಟಿಕಲ್ 370’ (Article 370) ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಆದಿತ್ಯ ಧಾರ್- ಯಾಮಿ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ತಿಳಿಸಿದ್ದಾರೆ. ಯಾಮಿ ಐದೂವರೆ ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ.

2019ರಲ್ಲಿ ‘ಉರಿ’ ಸಿನಿಮಾ ವೇಳೆ, ನಿರ್ದೇಶಕ ಆದಿತ್ಯಾ ಧಾರ್ ಮತ್ತು ಯಾಮಿ ಪರಿಚಯವಾಯ್ತು. 2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಯಾಮಿ-ಆದಿತ್ಯ ಧಾರ್ ಮದುವೆಯಾದರು. ಈಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ ಯಾಮಿ ದಂಪತಿ.


