ಮುಂಬೈ: ಬಾಲಿವುಡ್‍ನ ಹಲವು ಸ್ಟಾರ್ ನಟಿಯರು ಸರ್ಜರಿ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೆಲವು ನಟಿಯರು ನ್ಯಾಚ್ಯೂರಲ್ ಬ್ಯೂಟಿಯಲ್ಲೇ ಸಿನಿಮಾದಲ್ಲಿ ನಟಿಸಿ ಅಂದವಾಗಿ ಕಾಣಿಸಿದರೆ, ಇನ್ನೂ ಕೆಲವು ನಟಿಯರು ಶಸ್ತ್ರ ಚಿಕಿತ್ಸೆ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.
90ರ ದಶಕದ ಸ್ಟಾರ್ ನಟಿಯಾಗಿದ್ದ ಶಿಲ್ಪಾ ಶೆಟ್ಟಿ ಇಂದಿಗೂ ತಮ್ಮ ಫಿಟ್ನೆಸ್ ಮೆಂಟೇನ್ ಮಾಡುತ್ತಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದರು. ಶಿಲ್ಪಾ ತಮ್ಮ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡರು.
Advertisement
Advertisement
ಬಾಲಿವುಡ್ ನಿಂದ ಹಾಲಿವುಡ್‍ಗೆ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಸುಂದರವಾಗಿ ಕಾಣಲು ಸಾಕಷ್ಟು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಪ್ರಿಯಾಂಕಾ ತಮ್ಮ ತುಟಿ ಹಾಗೂ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಈಗ ಮತ್ತು ಹಿಂದಿನ ಫೋಟೋಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ.
Advertisement
Advertisement
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ತುಟಿಯ ಶಸ್ತ್ರ ಚಿಕಿತ್ಸೆ ನಡೆಸಿ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದರು. ಸಮಯಕ್ಕೆ ತಕ್ಕಂತೆ ಅವರು ಕೂಡ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಅನುಷ್ಕಾ ತಮ್ಮ ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಗ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು.
ಈ ಲಿಸ್ಟ್ ನಲ್ಲಿ ನಟಿ ಕಂಗನಾ ರಣೌತ್ ಕೂಡ ಸೇರಿದ್ದಾರೆ. ಕಂಗನಾ ನ್ಯಾಚ್ಯೂರಲ್ ಬ್ಯೂಟಿ ಎಂದು ಎಲ್ಲರು ತಿಳಿದಿದ್ದರು. ಆದರೆ ಅದು ತಪ್ಪು ಎಂದು ಈಗ ತಿಳಿದು ಬಂದಿದೆ. ಏಕೆಂದರೆ ಕಂಗನಾ ಈ ಮೊದಲು ತಮ್ಮ ತುಟಿಯ ಸರ್ಜರಿ ಮಾಡಿಸಿಕೊಂಡಿದ್ದರು. ನಂತರ ಅವರು ತಮ್ಮ ಸ್ತನದ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಇತ್ತೀಚೆಗೆ ‘ದಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಕೂಡ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡಿದ್ದಾರೆ. ಬಾಲಿವುಡ್‍ಗೆ ಕಾಲಿಡುವ ಮೊದಲೇ ಜಾಹ್ನವಿ ತನ್ನ ಲುಕ್ ಹೆಚ್ಚಿಸಿಕೊಳ್ಳಲು ತುಟಿ ಹಾಗೂ ಗಲ್ಲದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ಸಲ್ಮಾನ್ ಖಾನ್ ಜೊತೆ ‘ವಾಂಟೆಡ್’ ಚಿತ್ರದಲ್ಲಿ ನಟಿಸಿದ್ದ ಅಯೇಶಾ ಟಾಕಿಯಾ ಕೂಡ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಅಯೇಶಾ ತಮ್ಮ ತುಟಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿದ್ದಕ್ಕೆ ಜನ ಟ್ರೋಲ್ ಮಾಡಿದ್ದರು.
ಶ್ರೀದೇವಿ ಒಟ್ಟು 29 ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ಒಟ್ಟು 29 ಶಸ್ತ್ರಚಿಕಿತ್ಸೆಯಲ್ಲಿ ಒಂದು ಸರಿಯಾಗಿ ಆಗಿರಲಿಲ್ಲ. ಅಲ್ಲದೇ ಶ್ರೀದೇವಿ ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv