ಹೈದರಾಬಾದ್: ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿಯೊಬ್ಬರ ಜೊತೆ ಚಾಟ್ ಮಾಡುತ್ತಿದ್ದಳು ಎಂದು ಹೇಳಲಾಗಿದೆ.
ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್ನ ಶ್ರೀನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್ಮೆಂಟ್ನಲ್ಲಿ ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೊಲೀಸರು ಜಾನ್ಸಿ ಮೊಬೈಲ್ ಪರಿಶೀಲಿಸಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿಯೊಬ್ಬನಿಗೆ ವಾಟ್ಸಾಪ್ ಮೂಲಕ 14 ಮೆಸೇಜ್ ಕಳುಹಿಸಿದ್ದಾಳೆ. ಅಲ್ಲದೆ ತನ್ನ ಸಾವಿಗೆ ನಿಖರ ಕಾರಣವನ್ನು ವಿಡಿಯೋ ಮೂಲಕ ತಿಳಿಸಿದ್ದಾಳೆ.
Advertisement
ವ್ಯಕ್ತಿಯನ್ನು ಆಕೆಯ ಪ್ರಿಯಕರ ಸೂರ್ಯ ಎಂದು ಗುರುತಿಸಲಾಗಿದ್ದು, ಆದರೆ ಕಾರಣ ಬಿಚ್ಚಿಟ್ಟ ವಿಡಿಯೋದಲ್ಲಿ ಏನಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
Advertisement
Advertisement
ಏನಿದು ಘಟನೆ?
ಜಾನ್ಸಿ ಮೂಲತಃ ಕೃಷ್ಣ ಜಿಲ್ಲೆಯವಳಾಗಿದ್ದು, ಸೂರ್ಯ ಅಲಿಯಾಸ್ ನಾನಿಯನ್ನು ಪ್ರೀತಿಸುತ್ತಿದ್ದಳು. ಜಾನ್ಸಿ, ಸೂರ್ಯನನ್ನು ಮದುವೆಯಾಗಲು ಇಷ್ಟಪಟ್ಟಿದ್ದಳು. ಆದರೆ ಇವರಿಬ್ಬರ ಮದುವೆಗೆ ಸೂರ್ಯನ ಪೋಷಕರು ವಿರೋಧಿಸಿದ್ದರು. ಸೂರ್ಯ ಕೂಡ ಜಾನ್ಸಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಅಲ್ಲದೇ ಆತ ಜಾನ್ಸಿ ಜೊತೆ ಇರುವ ಬದಲು ಆಕೆಯಿಂದ ದೂರ ಇರುತ್ತಿದ್ದನು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಾನ್ಸಿಯ ಪೋಷಕರು ಆರೋಪಿಸಿದ್ದರು.
Advertisement
ಜಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾನ್ಸಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಜಾನ್ಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಸೂರ್ಯ ನಾಪತ್ತೆ ಆಗಿದ್ದಾನೆ. ಸದ್ಯ ಪೋಲೀಸರು ಆರೋಪಿ ಸೂರ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv