ಚೆನ್ನೈ: ನಾನು ಇನ್ನು ಬದುಕುವುದು ಅನುಮಾನ ಅಂತಾ ನಟಿ ವಿಜಯ ಲಕ್ಷ್ಮೀ ಅತಂಕದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ನನಗೆ ಕೋವಿಡ್ ಪಾಸಿಟಿವ್ ಆಗಿ ನಿಮೋನಿಯಾ ಆಗಿತ್ತು. ಆಸ್ಪತ್ರೆಯ ಖರ್ಚಿಗೂ ದುಡ್ಡಿಲ್ಲದೆ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ. ಜ್ವರ ಬಂದು ವಾಂತಿ ಮಾಡಿ ಸುಸ್ತಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮಾಧುರಿಯ ಮಾಡೆಲಿಂಗ್ ವೀಡಿಯೋ ನೋಡಿ ಫಿದಾ ಆದ ಅನುಷ್ಕಾ ಶರ್ಮಾ
Advertisement
Advertisement
ನಾನು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಸಹಾಯಕ್ಕಾಗಿ ಕಲಾವಿದರ ಸಂಘಕ್ಕೆ ಸಹಾಯ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ದಯವಿಟ್ಟು ಇದನ್ನ ಗಂಭೀರವಾಗಿ ತೆಗೆದುಕೊಳ್ಳಿ. ಅಭಿಮಾನಿಗಳೇ ನೀವು ತಿಳಿದುಕೊಳ್ಳಬೇಕು ಎಲ್ಲರೂ ಸೇರಿ ನನ್ನನ್ನು ಮರ್ಡರ್ ಮಾಡಿದಂತೆ ನನ್ನ ಕಥೆ ಮುಗಿಸಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ. ನನಗೆ ಇದರ ಮುಂದೆ ಶಕ್ತಿ ಇಲ್ಲ. ಯಾರ ಸಹಾಯವು ಸಿಗುತ್ತಿಲ್ಲ. ಎಲ್ಲರಲ್ಲೂ ಸಹಾಯ ಕೇಳಿ ಸುಸ್ತಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ
Advertisement
ನಾನು ಸತ್ತು ಹೋದರೆ ಇವರೆಲ್ಲರೂ ಸೇರಿ ಸಾಯಿಸಿದರು ಅಂತ ಗಂಭೀರವಾಗಿ ತೆಗೆದುಕೊಳ್ಳಿ. ಸಹಾಯ ಮಾಡದೇ ನನ್ನನ್ನು ಸಾಯಿಸುತ್ತಿದ್ದಾರೆ. ನಾನು ಉಳಿತೀನಾ ಇಲ್ಲವಾ ನನಗೆ ಗೊತ್ತಿಲ್ಲ ಎಂದು ಅಭಿಮಾನಿಗಳಲ್ಲಿ ದುಃಖ ತೊಡಿಕೊಂಡಿದ್ದಾರೆ. ಈ ಹಿಂದೆಯೂ ನಟಿ ವಿಜಯ ಲಕ್ಷ್ಮೀ ಸಾಕಷ್ಟು ಬಾರಿ ಸಹಾಯವನ್ನು ಸಿನಿಮಾ ಮಂದಿಯಲ್ಲಿ ಕೇಳಿದ್ದರು. ಯಾರು ಸ್ಪಂದಿಸದೆ ಇದ್ದಾಗ ಅವರ ವಿರುದ್ದವೂ ವಿಡಿಯೋದಲ್ಲಿ ಮಾತನಾಡಿ ತಮ್ಮ ಕೋಪ ಹಾಗೂ ಅಸಹಾಯಕತೆಯನ್ನು ಹೊರ ಹಾಕಿದ್ದರು.