ತಮಿಳು ನಾಡಿನ ಪ್ರಸಿದ್ಧ ರಾಜಕಾರಣಿ ಸೀಮನ್ ವಿರುದ್ಧ ಗರ್ಭಪಾತ ಮತ್ತು ಲೈಂಗಿಕ ಆರೋಪಗಳನ್ನು ಮಾಡಿದ್ದ ನಟಿ ವಿಜಯಲಕ್ಷ್ಮಿ, ಇದೀಗ ತಾವೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 2011ರಲ್ಲಿ ಸೀಮನ್ ತಮ್ಮನ್ನು ಮದುವೆಯಾಗಿ, ಹಲವಾರು ರೀತಿಯ ಹಿಂಸೆಗಳನ್ನು ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆನಂತರ 2012ರಲ್ಲಿ ವಿಜಯಲಕ್ಷ್ಮಿ ದೂರು ಹಿಂಪಡೆದಿದ್ದರು. ಆದರೂ, ಇತ್ತೀಚೆಗಷ್ಟೇ ಹಳೆಯ ದೂರನ್ನು ಮರುಪರೀಶಿಲಿಸಬೇಕು ಎಂದು ಮನವಿ ಮಾಡಿದ್ದರು. ಹಾಗಾಗಿ ಕೇಸ್ ಮತ್ತೆ ಕೋರ್ಟ್ ಮೆಟ್ಟಿಲು ಏರಿತ್ತು. ಸೀಮನ್ ಗೆ ನೋಟಿಸ್ ಕೂಡ ಜಾರಿಯಾಗಿತ್ತು.
Advertisement
ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿ ಮತ್ತೆ ದೂರನ್ನು ವಾಪಸ್ಸು ಪಡೆದು, ಸೀಮನ್ ವಿರುದ್ಧ ನನಗೆ ಸೋಲಾಗಿದೆ. ನಾನು ಸೋಲು ಒಪ್ಪಿಕೊಂಡು ಕೇಸ್ ವಾಪಸ್ಸು ಪಡೆಯುತ್ತಿದ್ದೇನೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ನಾನು ತಮಿಳು ನಾಡಿನಲ್ಲಿ ಇರಲಾರೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಕೇಸ್ ಹಿಂಪಡೆದ ವಿಚಾರವನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದರು. ಹೀಗಾಗಿ ಕೋರ್ಟ್ ವಿಜಯಲಕ್ಷ್ಮಿಗೆ ಸೆಪ್ಟೆಂಬರ್ 29ಕ್ಕೆ ಕೋರ್ಟಿಗೆ ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ನೀಡಿದೆ.
Advertisement
Advertisement
ಏನಿದು ಪ್ರಕರಣ?
Advertisement
ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ(Vijayalakshmi), ತಮಿಳುನಾಡಿನ ಹೆಸರಾಂತ ರಾಜಕಾರಣಿ ಸೀಮನ್ (Seaman) ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದಿದ್ದರು.
ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿರುವ ನಟಿ ವಿಜಯಲಕ್ಷ್ಮಿ, ‘200ರಲ್ಲಿ ತಾವು ನಾಮ್ ತಮಿಳರ್ ಕಟ್ಚಿ (ಎನ್.ಟಿಕೆ) ನಾಯಕರೂ ಆಗಿರುವ ಸೀಮನ್ ಜೊತೆ ಮದುವೆಯಾಗಿದ್ದೇನೆ. ಆನಂತರ ಅವರು ನನಗೆ ಮೋಸ ಮಾಡುತ್ತಲೇ ಹೋದರು. ನನ್ನ ಚಿನ್ನಾಭರಣ ದೋಚಿದರು. ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಅವರಿಂದ ನನಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ’ ಎಂದು ಹೇಳಿಕೆ ದಾಖಲಿಸಿದ್ದರು.
ಚೆನ್ನೈನ ಪೊಲೀಸ್ (Police) ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದ ವಿಜಯಲಕ್ಷ್ಮಿ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದರು. ಅಲ್ಲದೇ, ಫೇಸ್ ಬುಕ್ ಲೈವ್ ಗೆ ಬಂದು, ಈ ವಿಚಾರವನ್ನೂ ಮಾತನಾಡಿದ್ದರು. ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಸೀಮನ್ ಅವರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ದರು. ಅಷ್ಟರಲ್ಲಿ ವಿಜಯಲಕ್ಷ್ಮಿ ದೂರು ವಾಪಸ್ಸು ಪಡೆದರು.
ಈ ಘಟನೆಯ ಕುರಿತು ವಿಜಯಲಕ್ಷ್ಮಿ ಪರ ಹೋರಾಟ ಮಾಡುತ್ತಿರುವ ತಮಿಳರ್ ಮುನ್ನೆಟ್ರ ಪಡೈಯ ಅಧ್ಯಕ್ಷೆ ವೀರಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಲವಾರು ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಿದ್ದೇವೆ. ಅವರು ಪ್ರಭಾವಿ ರಾಜಕಾರಣಿ ಆಗಿರುವುದರಿಂದ ನ್ಯಾಯ ಸಿಗುತ್ತಿಲ್ಲ. ಈ ಬಾರಿ ನಮಗೆ ಶಿಕ್ಷೆ ಕೊಡಿಸುತ್ತೇವೆ ಎಂಬ ನಂಬಿಕೆ ಬಂದಿದೆ ಎಂದಿದ್ದರು. ಈ ಎಲ್ಲ ಬೆಳವಣಿಗೆ ನಂತರ ವಿಜಯಲಕ್ಷ್ಮಿ ಕೇಸ್ ನಿಂದ ದೂರ ಉಳಿಯುವುದಾಗಿ ಘೋಷಿಸಿದರು.
Web Stories