ಸ್ಯಾಂಡಲ್‌ವುಡ್‌ನ `ವಿರಾಟ್’ ಮತ್ತು `ನಲಿ ನಲಿಯುತ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ನಟಿ ವಿದಿಶಾ ಶ್ರೀವಾಸ್ತವ್‌ಗೆ ಈಗಾಗಲೇ ಮದುವೆಯಾಗಿದೆ. ಅವರ ಮದುವೆಯ ವಿಚಾರದ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅಸಲಿ ವಿಚಾರವೇನು ಇಲ್ಲಿದೆ ಡಿಟೈಲ್ಸ್
- Advertisement 2-
ಬ್ಯೂಟಿ ಜತೆ ಪ್ರತಿಭೆ ಇರುವ ವಿದಿಶಾ ಶ್ರೀವಾಸ್ತವ್‌ಗೆ ತಂಗಿ ಶಾನ್ವಿಗೆ ಸಿಕ್ಕಷ್ಟು ಜನಪ್ರಿಯತೆ ವಿದಿಶಾಗೆ ಸಿಕ್ಕಿಲ್ಲ. ಆದರೆ ಕನ್ನಡದ `ವಿರಾಟ್’ ಮತ್ತು `ನಲಿ ನಲಿಯುತ’ ಚಿತ್ರದ ಮೂಲಕ ಗಮನ ಸೆಳೆದ ನಟಿ ವಿದಿಶಾ ಇದೀಗ ಹಿಂದಿ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣ ಗಣನೆ
- Advertisement 3-
ಸದ್ಯ ಶಾನ್ವಿ ಅಕ್ಕ ವಿದಿಶಾ ಯಾರು ಹೇಳದೇ ಮದುವೆ ಆದ್ರಾ ಎಂಬ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿದಿಶಾ ಶ್ರೀವಾಸ್ತವ್ ನಾಲ್ಕು ವರ್ಷಗಳ ಹಿಂದೆ ಸಾಯಕ್ ಎಂಬುವವರ ಜತೆ ಮದುವೆ ಆಗಿದ್ದಾರೆ.
- Advertisement 4-
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ವಿದಿಶಾಗೆ ಸ್ವಲ್ಪ ಬ್ರೇಕ್ ಬೇಕು ಎಂದು ಮುಂಬೈನ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಸಾಯಕ್ ಪರಿಚಯವಾಗಿ, ಸ್ನೇಹದಿಂದ ಪ್ರೀತಿಗೆ ತಿರುಗಿ 2018ರಲ್ಲಿ ಬನಾರಸ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಆದರೆ ಸಾಯಕ್ ಸರಳ ವ್ಯಕ್ತಿ ಆಗಿರೋದರಿಂದ ತಮ್ಮ ಬದುಕನ್ನ ವಯಕ್ತಿಕವಾಗಿ ಇಡಲು ಇಷ್ಟಪಟ್ಟಿದ್ದರು. ವಿದಿಶಾ ಮತ್ತು ಸಾಯಕ್ ಮದುವೆಯಾಗಿ ನಾಲ್ಕು ವರ್ಷಗಳು ಕಳೆದಿದ್ದು, ವಿದಿಶಾ ಶ್ರೀವಾಸ್ತವ್ ಮದುವೆ ವಿಚಾರವೇ ಸದ್ಯ ಸಖತ್ ಸದ್ದು ಮಾಡುತ್ತಿದೆ.