ತಮಿಳಿನ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಬಹುಕಾಲದ ಗೆಳೆಯನ ಜೊತೆ ಜುಲೈ 2ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ವಿವಾಹ ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ಸಂಭ್ರಮದಲ್ಲಿ ತಮಿಳಿನ ಸ್ಟಾರ್ ಕಲಾವಿದರ ದಂಡೇ ಸಾಕ್ಷಿಯಾಗಲಿದೆ. ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಶಿವಣ್ಣ ಫ್ಯಾನ್ಸ್‌ಗೆ ಸಿಹಿಸುದ್ದಿ- ಏನದು?
ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ಪಿಎಂ ನರೇಂದ್ರ ಮೋದಿಗೂ ನಟಿಯ ಕುಟುಂಬ ವಿಶೇಷವಾಗಿ ಆಮಂತ್ರಣ ನೀಡಿದೆ.
ಅಂದಹಾಗೆ, ಮಾಣಿಕ್ಯ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.
ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.