ಕಾಲಿವುಡ್ ನಟ ಶರತ್ ಕುಮಾರ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ (Varalaxmi Sarathkumar) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನಟಿ ನಯನತಾರಾ, ಮಾಸ್ ಮಹಾರಾಜ ರವಿತೇಜ ಸೇರಿದಂತೆ ಅನೇಕರಿಗೆ ವರಲಕ್ಷ್ಮಿ ಮದುವೆ (Wedding) ಪತ್ರಿಕೆ ನೀಡಿದ್ದಾರೆ.
ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ (Nayanathara) ದಂಪತಿ, ರವಿತೇಜ (Ravi Teja), ತಮಿಳು ನಟ ಸಿದ್ಧಾರ್ಥ್ (Siddarth), ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಗೋಪಿ ಚಂದ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಕಲ್ಕಿ ಪ್ರಭಾಸ್‌ಗೆ ಜೊತೆಯಾದ ವಿಜಯ್ ದೇವರಕೊಂಡ
ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.
ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.