‘ಅಗ್ನಿಸಾಕ್ಷಿ’, ‘ಸೀತಾರಾಮ’ (Seetharama) ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿಯ ಅಣ್ಣನ ಪತ್ನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಅತ್ತಿಗೆಯ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ಜರುಗಿದೆ.
ಅಣ್ಣನ ಪತ್ನಿಯ ಸೀಮಂತ ಸಂಭ್ರಮದ ಫೋಟೋ ಹಂಚಿಕೊಂಡು, ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ನಟಿ ಬರೆದುಕೊಂಡಿದ್ದಾರೆ. ಈ ಮೂಲಕ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿರೋದಾಗಿ ನಟಿ ತಿಳಿಸಿದ್ದಾರೆ. ಅತ್ತಿಗೆಯ ಸೀಮಂತ (Baby Shower) ಶಾಸ್ತ್ರದ ಫೋಟೋ ಶೇರ್ ಮಾಡ್ತಿದ್ದಂತೆ ನಿಮ್ಮ ಮದುವೆ ಯಾವಾಗ? ಎಂದು ಅಭಿಮಾನಿಗಳು ವೈಷ್ಣವಿಗೆ ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ:‘ಸ್ತ್ರೀ 2’ ಚಿತ್ರದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಶ್ರದ್ಧಾ ಕಪೂರ್
View this post on Instagram
ಅಂದಹಾಗೆ, ಪ್ರಸ್ತುತ ನಟ ಗಗನ್ ಜೊತೆ ‘ಸೀತಾರಾಮ’ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ಗೆ ಅಪಾರ ಅಭಿಮಾನಿಗಳ ಬಳವಿದೆ. ಸನ್ನಿಧಿ ಪಾತ್ರದ ಬಳಿಕ ಸೀತಾ ಪಾತ್ರದ ವೈಷ್ಣವಿ ನಟನೆಗೆ ಫ್ಯಾನ್ಸ್ ಮನಸೋತಿದ್ದಾರೆ.
ಕಿರುತೆರೆಯ ಜೊತೆ ಸಿನಿಮಾದಲ್ಲಿಯೂ ಮಿಂಚಲು ನಟಿ ರೆಡಿಯಾಗಿದ್ದಾರೆ. ಡೈರೆಕ್ಟರ್ ಮಹೇಶ್ ಗೌಡ ನಟನೆಯ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರದಲ್ಲಿ ವೈಷ್ಣವಿ ಗೌಡ ನಾಯಕಿಯಾಗಿದ್ದಾರೆ.