ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

Public TV
1 Min Read
Vaishnavi Gowda Seetha Rama Serial Anukool Mishra

ಸೆಮಣೆ ಏರಲು ಸಜ್ಜಾಗಿರುವ ಕನ್ನಡದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಮದುವೆ ಶಾಸ್ತ್ರಗಳ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರ ಮನೆಗಳಲ್ಲೂ ಮದುವೆಗೆ ಸಕಲ ತಯಾರಿಗಳು ನಡೆಯುತ್ತಿವೆ. ವಿವಾಹಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ವೈಷ್ಣವಿ ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಸೀರಿಯಲ್ ಲೋಕದಲ್ಲಿ ಇದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸಹ ಅವರು ಸ್ಪರ್ಧಿಸಿದ್ದರು. ಇನ್ನೂ ಅನುಕೂಲ್ ಮಿಶ್ರಾ ಅವರು, ಏರ್​ ಫೋರ್ಸ್​ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಭಾರತದ ಛತ್ತಿಸ್​ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಹೇಳಿಕೊಂಡಿದ್ದರು.

ಮದುವೆ ಬಳಿಕವೂ ನಟಿಸುವ ಬಗ್ಗೆ ಮಾತಾಡಿದ್ದ ವೈಷ್ಣವಿ, ಮದುವೆಯ ಬಳಿಕವೂ ನಟನೆಗೆ ಅನುಮತಿ ಇದೆ. ಅವರು ನನ್ನ ಸೀರಿಯಲ್ ದಿನಾ ನೋಡುತ್ತಾರಂತೆ. ಸೀರಿಯಲ್ ಬಗ್ಗೆ ನನಗಿಂತ ಹೆಚ್ಚು ಅವರು ಅಪ್‌ಡೇಟ್ ಇದ್ದಾರೆ. ಮದುವೆ ಬಗ್ಗೆ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು. ಅನುಕೂಲ್ ಅವರು ಬೆಂಗಳೂರಿನಲ್ಲೇ ಇರೋದ್ರಿಂದ ಮದುವೆ ಬಳಿಕವೂ ಇಲ್ಲೇ ಇರುತ್ತೇವೆ. ದೇವರು ತಡ ಮಾಡೋದು ಒಳ್ಳೆಯದನ್ನ ಮಾಡೋದಕ್ಕಾಗಿ ಎಂದು ನಂಬುತ್ತೇನೆ ಎಂದು ಹೇಳಿದ್ದರು.

ವೈಷ್ಣವಿ ಗೌಡ, ‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮೂಲಕ ಆಗಾಗ ಅಭಿಮಾನಿಗಳನ್ನು ಸೆಳೆಯುವ ವೈಷ್ಣವಿ ತಮ್ಮದೇ ಫ್ಯಾನ್ಸ್‌ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

Share This Article