ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ `ಐರಾವತ’ ಬ್ಯೂಟಿ ಊರ್ವಶಿ

ಬಹುಭಾಷಾ ನಟಿ ಊರ್ವಶಿ ಸಿನಿಮಾ ಜೊತೆ ಆಗಾಗ ತಮ್ಮ ಕಾಸ್ಟ್ಯೂಮ್ ವಿಚಾರವಾಗಿ ಕೂಡ ಸದ್ದು ಮಾಡುತ್ತಿರುತ್ತಾರೆ. ದುಬಾರಿ ಬಟ್ಟೆ ತೊಟ್ಟು ಸದಾ ಸುದ್ದಿ ಮಾಡುತ್ತಿದ್ದ ನಟಿ ಈಗ ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್ ಧರಿಸಿ ನಟಿ ಊರ್ವಶಿ ವಿಮಾನವೇರಿದ್ದಾರೆ. ಈಗ ಫೋಟೋ ಕುರಿತು ಸಖತ್ ಚರ್ಚೆ ಕೂಡ ಆಗುತ್ತಿದೆ.
View this post on Instagram
ಊರ್ವಶಿ ಸದ್ಯ `ದಿ ಲೆಜೆಂಡ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಏರ್‌ಪೋರ್ಟ್ಗೆ ಹರಿದ ಜೀನ್ಸ್ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಟೋರ್ನ್ ಜೀನ್ಸ್ ಮುಂದೆ ಹರಿದಿರೋದನ್ನ ನೋಡಿರುತ್ತೇವೆ. ಆದರೆ ಊರ್ವಶಿ ಹಿಂದೆಯೂ ಹರಿದಂತೆ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದಾರೆ.ನಟಿಯ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ:ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್
View this post on Instagram
ಸಾಲು ಸಾಲು ಸಿನಿಮಾಗಳಲ್ಲಿ ಊರ್ವಶಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಂಭಾವನೆಯೂ ಪಡೆಯುತ್ತಾರೆ ಹೀಗಿರುವಾಗ ತುಂಬಾ ಬಟ್ಟೆ ಧರಿಸಿ ಓಡಾಡಿ ಅಂತಾ ನಟಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ತುತ್ತು ಅನ್ನ ತಿನ್ನೋಕೆ ಹಾಡು ನೆನಪಾಯಿತು ಅಂತಾ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಊರ್ವಶಿ ಹರಿದ ಜೀನ್ಸ್ ಎಂಟ್ರಿಗೆ ಫ್ಯಾನ್ಸ್ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
Live Tv