ಬಾತ್ ರೂಮ್ ವಿಡಿಯೋ ಲೀಕ್ ಆಗಿದ್ದು ನಿಜ ಎಂದು ಒಪ್ಪಿಕೊಂಡ ಊರ್ವಶಿ ರೌಟೇಲಾ

Public TV
1 Min Read
urvashi rautela 2

ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಲ್ಲಾ ಒಂದು ರೀತಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿಯ ಸ್ನಾನದ ವಿಡಿಯೋ ಲೀಕ್ ಆಗಿತ್ತು. ಈ ಬಗ್ಗೆ ‘ಐರಾವತ’ ನಟಿ ಊರ್ವಶಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಒಂದೇ ಚಿತ್ರದಲ್ಲಿ 5 ಬಾಲಿವುಡ್ ಸ್ಟಾರ್ಸ್‌ಗೆ ‘ಆರ್ಟಿಕಲ್ 370’ ನಿರ್ದೇಶಕ ಆ್ಯಕ್ಷನ್ ಕಟ್

urvashi rautela

ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ಮಾತನಾಡಿ, ಕ್ಲಿಪ್ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ‘ಘುಸ್ಪೈತಿಯೇ’ ಚಲನಚಿತ್ರದ ಭಾಗವಾಗಿದೆ ಎಂದಿದ್ದಾರೆ. ಯಾವ ಹುಡುಗಿಗೂ ಈ ರೀತಿ ಆಗಬಾರದು ಎಂದು ನಟಿ ಮಾತನಾಡಿದ್ದಾರೆ.

urvashi rautelaನಟಿಯ ಸ್ನಾನದ ವಿಡಿಯೋ ವೈರಲ್ ಆದಾಗ ಇದನ್ನು ಪಿಆರ್ ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವಿಡಿಯೋದಲ್ಲಿ ಮಂಗಳಸೂತ್ರ ಕೂಡ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು.

‘ಘುಸ್ಪೈತಿಯೇ’ ಸಿನಿಮಾದಲ್ಲಿ ಊರ್ವಶಿ ನಾಯಕಿಯಾಗಿ ನಟಿಸಿದ್ದಾರೆ. ಆಗಸ್ಟ್ 9ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

Share This Article