ವಿಚಿತ್ರ ಉಡುಗೆ ಧರಿಸುವ ಮೂಲಕ ಸದಾ ಸುದ್ದಿಯಲ್ಲಿರುವ ‘ಬಿಗ್ ಬಾಸ್’ (Bigg Boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್‌ಇಡಿ ಡಿಸ್ಪ್ಲೇನಿಂದ ಮೈ ಮುಚ್ಚಿಕೊಂಡಿರುವ ವಿಡಿಯೋವೊಂದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಪ್ಪು ಬಣ್ಣದ ಸ್ಕರ್ಟ್‌ಗೆ ಬಸ್, ಮಳಿಗೆಗಳಲ್ಲಿ ಬಳಸುವ ಡಿಜಿಟಲ್ ನಾಮಫಲಕವನ್ನು ಉರ್ಫಿ ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. ನಟಿಯ ವಿಭಿನ್ನ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಂತಹ ಐಡಿಯಾಗಳು ಇವರಿಗೆ ಮಾತ್ರ ಬರುತ್ತದೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
ಈ ಹಿಂದೆ ಕೂಡ ಬಟ್ಟೆಯೊಳಗೆ ಬ್ರಹ್ಮಾಂಡ ತೋರಿಸಿದ್ದರು. ಬಳಿಕ ಪ್ಲಾಸ್ಟಿಕ್, ಹೂವು, ಎಲೆಗಳು, ನೋಟ್, ಬಾಳೆ ಹಣ್ಣಿನ ಸಿಪ್ಪೆಯಿಂದ ಡಿಫರೆಂಟ್ ಉಡುಗೆಗಳನ್ನು ಧರಿಸಿ ನಟಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಮಾಜಿ ಪತಿಯ ನಿಶ್ಚಿತಾರ್ಥದ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್
ಉರ್ಫಿ ಜಾವೇದ್ ಅವರು ಬೇಪನ್ಹಾ, ಡಿಯಾನ್, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಬಡೆ ಭಯ್ಯಾ, ಐ ಮೇರೆ ಹಮ್ಸಾಫರ್, ಚಂದ್ರ ನಂದಿನಿ ಮತ್ತು ಮೇರಿ ದುರ್ಗಾ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.