ಬಾಲಿವುಡ್ ನಟಿ, ವಿಚಿತ್ರ ಕಾಸ್ಟ್ಯೂಮ್ ನಿಂದಾಗಿಯೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ತೆಗೆದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮಗಿರುವ ಸಮಸ್ಯೆ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಅದರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಚಿತ್ರ ವಿಚಿತ್ರ ಬಟ್ಟೆ ಹಾಕುವ ಕಾರಣದಿಂದಾಗಿಯೇ ಅವರ ಮೇಲೆ ದೂರನ್ನು ನೀಡಿದ್ದಾರೆ. ಕೆಲ ಪ್ರಕರಣಗಳು ಅವರನ್ನು ಬೆನ್ನತ್ತಿ ಕಾಡುತ್ತಿವೆ. ಇವುಗಳಿಂದ ತಪ್ಪಿಸಿಕೊಳ್ಳಲು ಅವರು ಆಸ್ಪತ್ರೆಯ ನಾಟಕ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಸ್ವತಃ ಉರ್ಫಿ ಅವರೇ ಹೇಳಿರುವಂತೆ ಅವರಿಗೆ ‘ಲಾರಿಂಜೈಟಿಸ್’ ತೊಂದರೆ ಆಗಿದೆಯಂತೆ. ಇದನ್ನೂ ಓದಿ: ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಮನುಷ್ಯನ ಧ್ವನಿ ಪೆಟ್ಟಿಗೆಗೆ ತಗಲುವ ಸೋಂಕಿಗೆ ಲಾರಿಂಜೈಟಿಸ್ ಎಂದು ಕರೆಯುತ್ತಾರೆ. ಉರ್ಫಿಯ ಗಂಟಲಿಗೆ ಈ ಸೋಂಕು ತಗುಲಿದಿಯಂತೆ. ಅಷ್ಟಕ್ಕೆ ಭಯ ಪಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕಿತ್ಸೆಯನ್ನೂ ಅವರು ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಇರುವಾಗಲೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೆಲವರು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ.