ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಉರ್ಫಿ ಜಾವೇದ್ (Urfi Javed) ಅರೆಬರೆ ಬಟ್ಟೆ ಹಾಕಿಕೊಂಡು ಮುಂಬೈ (Mumbai) ವಿಮಾನ ನಿಲ್ದಾಣದಲ್ಲಿ (Airport) ಕಾಣಿಸಿಕೊಂಡಿದ್ದಾರೆ. ಪೂರ್ತಿ ಬೆನ್ನು ಕಾಣುವಂತೆ ಹಾಕಿದ್ದ ಕಾಸ್ಟ್ಯೂಮ್ ಕಂಡ ವ್ಯಕ್ತಿಯೊಬ್ಬ ‘ನೀನು ನಮ್ಮ ದೇಶದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದೀಯಾ. ಇಂತಹ ಬಟ್ಟೆಗಳನ್ನು ನೀವು ಧರಿಸೋದು ಯಾಕೆ?’ ಎಂದು ವ್ಯಕ್ತಿಯು ಪ್ರಶ್ನೆ ಮಾಡುತ್ತಾರೆ.
ಇದನ್ನು ಕೇಳಿಸಿಕೊಂಡ ಉರ್ಫಿ ತಕ್ಷಣವೇ ಆವ್ಯಕ್ತಿಯೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ‘ನಾನು ಈ ರೀತಿಯ ಬಟ್ಟೆ ಹಾಕುವುದರಿಂದ ನಿನಗೆ, ನಿನ್ನ ತಂದೆಗೆ ಏನಾದರೂ ತೊಂದರೆಯಾ?’ ಎನ್ನುತ್ತಾ ಹರಿಹಾಯ್ತಾಳೆ. ಆ ಸನ್ನಿವೇಶವನ್ನು ಕಂಡ ಮಹಿಳೆಯೊಬ್ಬರು ಉರ್ಫಿ ಮತ್ತು ಆವ್ಯಕ್ತಿಯ ನಡುವಿನ ಮಾತುಕತೆ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಉರ್ಫಿಯನ್ನೂ ಸಮಾಧಾನ ಮಾಡಿ ಕಳಿಸ್ತಾರೆ. ಇದನ್ನೂ ಓದಿ:ಕಾಲ್‌ಶೀಟ್ ಕದನಕ್ಕೆ ಬ್ರೇಕ್ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್
ಈ ವಿಡಿಯೋವನ್ನು ಶೂಟ್ ಮಾಡದಂತೆ ಉರ್ಫಿ ನಂತರ ಮನವಿ ಮಾಡುತ್ತಾರೆ. ಆದರೂ, ಈ ವಿಡಿಯೋ ಶೂಟ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರಿಗೆ ಈ ರೀತಿ ಕಾಮೆಂಟ್ ಮಾಡುವುದು ಮೊದಲೇನೂ ಅಲ್ಲ. ಹಲವಾರು ಬಾರಿ ಇಂತಹ ಸನ್ನಿವೇಶವನ್ನು ಅವರು ಎದುರಿಸಿದ್ದಾರೆ.
ಕೇವಲ ಜನರು ನಿಂದಿಸುವುದು ಮಾತ್ರವಲ್ಲ, ಉರ್ಫಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಹಲವಾರು ಜನರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಹಾಗಂತ ಉರ್ಫಿ ಹೆದರಿಕೊಂಡಿಲ್ಲ, ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಮಹಿಳಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]