ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರ(Leelavathi) ಆರೋಗ್ಯವನ್ನು (Health) ವಿಚಾರಿಸಿಕೊಳ್ಳುವ ಸಲುವಾಗಿ ನಟಿ ಉಮಾಶ್ರೀ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸೊಲದೇವನಹಳ್ಳಿಯಲ್ಲಿ ವಾಸವಾಗಿರುವ ನಟಿ ಲೀಲಾವತಿ, ವಿನೋದ್ ರಾಜ್ (Vinod Raj) ಅವರ ತೋಟದ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಅನೇಕ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮರೆತು ಬೇರೆ ಇದ್ದು, ತಮ್ಮ ಜೀವನವನ್ನು ನೋಡಿ ಕೊಳ್ಳುತ್ತಾರೆ. ಆದರೆ ನಟ ವಿನೋದ್ ರಾಜ್ ತಮ್ಮ ತಾಯಿ, ಹಿರಿಯ ನಟಿ ಎಂ.ಲೀಲಾವತಿಯವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಕಳೆದ ವಾರ ವ್ಯಾಯಾಮಕ್ಕೆ ಹಾಡಿನ ಜೊತೆಯಲ್ಲಿ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿತ್ತು. ಇದಾದ ಬಳಿಕ, ಲೀಲಾವತಿ ಅವರ ಮನೆಗೆ ಪೂಜಾ ಗಾಂಧಿ ಸೇರಿದಂತೆ ಹಲವು ಕಲಾವಿದರು ಭೇಟಿ ನೀಡಿ, ಲೀಲಾವತಿ ಆರೋಗ್ಯ ವಿಚಾರಿಸಿದ್ದರು. ಈಗ ನಟಿ ಉಮಾಶ್ರೀ(Umashree), ಪದ್ಮಾ ವಾಸಂತಿ (Padmavasanthi) ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಲೀಲಾವತಿಯವರು ಕೆಲ ಕಾಲ ಉಮಾಶ್ರೀ ಹಾಗೂ ನಟಿ ಪದ್ಮವಾಸಂತಿಯವರ ಜೊತೆಗೆ ಹಿಂದಿನ ಚಿತ್ರರಂಗ ಹೇಗಿತ್ತು, ಮತ್ತು ಆಗಿನ ಊಟ ಉಪಚಾರಗಳು ಎಷ್ಟು ದೇಹಕ್ಕೆ ಚೈತನ್ಯ ನೀಡುತ್ತಿದ್ದವು ಹಾಗು ಇನ್ನೂ ಹಲವು ಹಳೆಯ ವಿಚಾರಗಳನ್ನು ನಟಿಯರು ಮೆಲುಕು ಹಾಕಿದ್ದಾರೆ. ನಂತರ ನಟಿಯರು, ಹಿರಿಯ ನಟಿ ಜೊತೆ ಆಟವಾಡಿ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್
ನಟ ವಿನೋದ್ ರಾಜ್-ಲೀಲಾವತಿ (Leelavathi) ಅವರ ಯೋಗಕ್ಷೇಮ ವಿಚಾರಿಸಿ, ಉಮಾಶ್ರೀ- ಪದ್ಮವಾಸಂತಿ ಅವರು ಒಳ್ಳೆಯ ಸಮಯ ಕಳೆದಿದ್ದಾರೆ. ಅವರ ಭೇಟಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.