ಅಕ್ಷಯ್ ಕುಮಾರ್ (Akshay Kumar) ಮತ್ತು ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ (Operation Sindoor) ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ ಎಂದು ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ (Twinkle Khanna) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಉಪ್ಪಿ-‘ಕರ್ವ’ ಡೈರೆಕ್ಟರ್ ಆ್ಯಕ್ಷನ್ ಕಟ್
ನೈಜ ಕಥೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಿನಿಮಾ ಮಾಡಲು ಅಕ್ಷಯ್ ಕುಮಾರ್ ಮತ್ತು ವಿಕ್ಕಿ ಕೌಶಲ್ ನಡುವೆ ಪೈಪೋಟಿ ನಡೆಯುತ್ತಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಇದು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿ ಫೇಕ್ ಸುದ್ದಿ ಎಂದಿದ್ದಾರೆ. ಈ ಸಿನಿಮಾಗಾಗಿ ಇಬ್ಬರೂ ಫೈಟ್ ಮಾಡ್ತಿಲ್ಲ. ಅಕ್ಷಯ್ ಮತ್ತು ವಿಕ್ಕಿ ತಾವು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್
ಪಾಕ್‌ಗೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದನ್ನೇ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರಲ್ಲಿ ಪೈಪೋಟಿ ನಡೆಯುತ್ತಿದೆ. ಈ ವೇಳೆ, ಅಕ್ಷಯ್ ಮತ್ತು ವಿಕ್ಕಿ ಸಿನಿಮಾ ಮಾಡಲು ಕಿತ್ತಾಡುತ್ತಿದ್ದಾರೆ ಎಂಬ ಸುದ್ದಿ ಫೇಕ್ ಎಂದು ಕ್ಲ್ಯಾರಿಟಿ ನೀಡಿದ್ದಾರೆ ಟ್ವಿಂಕಲ್ ಖನ್ನಾ.
ಹೌಸ್‌ಫುಲ್ 5, ಜಾಲಿ ಎಲ್‌ಎಲ್‌ಬಿ 3, ವೆಲ್‌ಕಮ್ ಟು ದಿ ಜಂಗಲ್, ಕಣ್ಣಪ್ಪ ಸೇರಿದಂತೆ ಹಲವು ಚಿತ್ರಗಳು ಟ್ವಿಂಕಲ್ ಖನ್ನಾ ಕೈಯಲ್ಲಿವೆ. ವಿಕ್ಕಿ ಕೌಶಲ್ ಛಾವಾ ಸಕ್ಸಸ್ ಬಳಿಕ ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.