ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
Advertisement
Advertisement
ಹಿಂದಿ ಕಿರುತೆರೆ ಲೋಕದಲ್ಲಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವುಗಳು ಸಿಗುತ್ತಿವೆ. ಆಕೆ ಆತ್ಮಹತ್ಯೆಗೂ ಎರಡು ನಿಮಿಷ ಮುನ್ನ ಬಾಯ್ ಫ್ರೆಂಡ್ ಗೆ ಕಾಲ್ ಮಾಡಿ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ. ಅದೇ ಅವರ ಕೊನೆಯ ಕಾಲ್ ಕೂಡ ಆಗಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
Advertisement
ಈ ನಟಿ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದರಂತೆ. ಶ್ರದ್ಧಾಳನ್ನು ಅವನ ಪ್ರಿಯಕರ 25 ಪೀಸ್ ಮಾಡಿದ್ದ ವಿಷಯ ಶಿಜಾನ್ ನಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು ಎಂದು ಹೇಳಲಾಗಿದೆ.