ಹಿಂದಿಯ ಖ್ಯಾತ ಕಿರುತೆರೆ ನಟಿ ತುನಿಶಾ ಶರ್ಮಾ (Tunisha Sharma) ಆತ್ಯಹತ್ಯೆ (Suicide) ಪ್ರಕರಣ ತೀವ್ರಗತಿಯಲ್ಲಿ ತನಿಖೆ ನಡೆದಿದೆ. ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಟುಡಿಯೋಗೆ ಬೆಂಕಿ (Fire) ಬಿದ್ದಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ. ಇನ್ನೂ ಪ್ರಕರಣದ ತನಿಖೆ ಅಂತ್ಯವಾಗಿಲ್ಲ, ಅದಕ್ಕೂ ಮುನ್ನವೇ ಸ್ಟುಡಿಯೋಗೆ ಬೆಂಕಿ ಬಿದ್ದಿರುವುದು ಸಾಕಷ್ಟು ಚರ್ಚೆಗಳನ್ನೂ ಹುಟ್ಟು ಹಾಕಿದೆ.
ತುನಿಶಾ ಶರ್ಮಾ ಶೂಟಿಂಗ್ ವೇಳೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿಂದಿಯ ಜನಪ್ರಿಯ ಧಾರಾವಾಹಿ ಅಲಿ ಬಾಬಾ ಚಿತ್ರೀಕರಣ ವೇಳೆ ಈ ಘಟನೆ ನಡೆದಿತ್ತು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ತುನಿಶಾ ಕುಟುಂಬ ಆರೋಪಿಸಿತ್ತು. ಹಾಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದರು ಪೊಲೀಸ್ ಅಧಿಕಾರಿಗಳು. ಇನ್ನೂ ತನಿಖೆ ಮುಗಿದಿಲ್ಲ. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ಸ್ಥಳ ಸೇರಿದಂತೆ ಹಲವು ಜಾಗಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್ ವಿರುದ್ಧ ಪ್ರಕರಣ ದಾಖಲು
ಮುಂಬೈನ (Mumbai) ಹೊರ ವಲಯದಲ್ಲಿರುವ ದಿ ಬಂಜನ್ ಲಾಲ್ ಸ್ಟುಡಿಯೋ (The Banjan Lal Studio) ಧಾರಾವಾಹಿಗಳ ಚಿತ್ರೀಕರಣಕ್ಕೆ ಫೇಮಸ್. ಈ ಸ್ಟುಡಿಯೋಗೆ ಶುಕ್ರವಾರ ತಡರಾತ್ರಿ ಬೆಂಕಿ ಬಿದ್ದಿದೆ. ಇದಕ್ಕೆ ಕಾರಣ ಏನು ಎನ್ನುವುದರ ಕುರಿತು ತನಿಖೆ ನಡೆಯಬೇಕಿದೆ. ಆತ್ಮಹತ್ಯೆ ನಡೆದ ಸ್ಥಳವೂ ಸುಟ್ಟು ಹೋಗಿರುವುದರಿಂದ ಈ ಪ್ರಕರಣ ಅನುಮಾನವನ್ನು ಮೂಡಿಸಿದೆ.