ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಶಿಜಾನ್ ಕಾರಣ ಎಂದು ತುನಿಷಾ ತಾಯಿ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ತುನಿಷಾ ಸಾವಿಗೂ ಮುನ್ನ ಶಿಜಾನ್ ನನ್ನ ಮಗಳ ಕೆನ್ನೆಗೆ ಬಾರಿಸಿದ್ದಾನೆ ಎಂದು ಹೇಳಿದ್ದರು. ಈ ಮಾತಿನ ಬೆನ್ನಲ್ಲೇ ಶಿಜಾನ್ ಮತ್ತು ತುನಿಷಾ ವಾಗ್ವಾದ ಮಾಡುತ್ತಿರುವ ಸಿಸಿಟಿವಿ ಫೂಟೇಸ್ ಪತ್ತೆಯಾಗಿದೆ. ಈ ದೃಶ್ಯಾವಳಿಯನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
Advertisement
ನಿನ್ನೆಯಷ್ಟೇ ಆಕೆ ಆತ್ಮಹತ್ಯೆಗೂ ಎರಡು ನಿಮಿಷ ಮುನ್ನ ಬಾಯ್ ಫ್ರೆಂಡ್ ಗೆ ಕಾಲ್ ಮಾಡಿ ಮಾತನಾಡಿದ್ದರು ಎಂದು ಹೇಳಲಾಗಿತ್ತು. ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದರಂತೆ. ಶ್ರದ್ಧಾಳನ್ನು ಅವನ ಪ್ರಿಯಕರ 25 ಫೀಸ್ ಮಾಡಿದ್ದ ವಿಷಯ ಶಿಜಾನ್ ನಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಎಂದು ಸಂಭ್ರಮಿಸಿದ ಫ್ಯಾನ್ಸ್
Advertisement
Advertisement
ಸಾಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಹೇಳಲಾಗಿತ್ತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದಾರೆ.
Advertisement
ಅಲ್ಲದೇ, ತುನಿಷಾ ಕುರಿತು ಅವರ ಬಾಯ್ ಫ್ರೆಂಡ್ ಶಿಜಾನ್ ಪೊಲೀಸರ ಎದುರು ಆಘಾತಕಾರಿ ಹೇಳಿಕೆಯನ್ನು ನೀಡಿದ್ದ. ತುನಿಷಾ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿಕೊಂಡಿದ್ದಾನೆ. ನಮ್ಮಿಬ್ಬರ ಮಧ್ಯ ಸಣ್ಣಪುಟ್ಟ ಗಲಾಟೆ ನಡೆಯುತ್ತಲೇ ಇತ್ತು. ಧರ್ಮದ ಕಾರಣಕ್ಕಾಗಿಯೂ ಜಗಳ ನಡೆದಿತ್ತು. ಇದರಿಂದ ಬೇಸತ್ತ ಅವರು ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು ಅವರನ್ನು ಬದುಕಿಸಿದೆ ಎಂದು ಹೇಳಿದ್ದಾನೆ ಎನ್ನಲಾಗುತ್ತಿದೆ.