ತಮಿಳು ನಟ ವಿಜಯ್ (Vijay Thalapathy) ದಾಂಪತ್ಯದಲ್ಲಿ ಬಿರುಕಾಗಿದೆ ಎಂದು ಕೆಲ ತಿಂಗಳುಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಹೀಗಿರುವಾಗ, ತ್ರಿಷಾ (Trisha) ಜೊತೆ ವಿಜಯ್ ಹೆಸರು ಕೇಳಿ ಬರುತ್ತಿದೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
ನಟಿ ತ್ರಿಷಾ ಕೃಷ್ಣನ್ (Trisha Krishnan) ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರಾ? ಹೀಗೊಂದು ಅನುಮಾನ ಅಭಿಮಾನಿ ವಲಯದಲ್ಲಿ ಕಾಡುತ್ತಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು, ನಟಿ ಶೇರ್ ಮಾಡಿರುವ ಪೋಸ್ಟ್. ವಿಜಯ್ ಹುಟ್ಟುಹಬ್ಬಕ್ಕೆ ನಟಿ ವಿಶೇಷವಾಗಿ ಶುಭಕೋರಿದ್ದಾರೆ. ವಿಜಯ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಜೂನ್ 30ಕ್ಕೆ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ ಸಿಎಂ
ತಮಿಳು ಸ್ಟಾರ್ ವಿಜಯ್ ಜೊತೆ ‘ಲಿಯೋ’ (Leo Film) ಸಿನಿಮಾದಲ್ಲಿ ತ್ರಿಷಾ ಅದ್ಭುತವಾಗಿ ಅಭಿನಯ ಮಾಡಿದ್ದರು. ಕಳೆದ ವರ್ಷ ಈ ಸಿನಿಮಾ ಮಾಡುವಾಗಲೇ ತ್ರಿಷಾ, ದಳಪತಿ ವಿಜಯ್ ಡೇಟಿಂಗ್ ಬಗ್ಗೆ ಗುಸು ಗುಸು ಮಾತುಗಳು ಕೇಳಿ ಬಂದಿತ್ತು.