‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಯಶಸ್ಸಿನಲ್ಲಿರುವ ಪ್ರಭಾಸ್ ಇದೀಗ ‘ಸ್ಪಿರಿಟ್’ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಈ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ತ್ರಿಷಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು
ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಇರುವ ನಟಿ ತ್ರಿಷಾ (Trisha) ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಜಯ ದಳಪತಿ, ಮೆಗಾಸ್ಟಾರ್ ಚಿರಂಜೀವಿ, ಅಜಿತ್ ಕುಮಾರ್‌ಗೆ ಪ್ರಸ್ತುತ ನಾಯಕಿಯಾಗಿ ಸದ್ದು ಮಾಡುತ್ತಿರುವ ತ್ರಿಷಾ ಇದೀಗ ಪ್ರಭಾಸ್ (Prabhas) ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.
ತ್ರಿಷಾರನ್ನು ಈಗಾಗಲೇ ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.
ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ರಾಜಾ ಸಾಬ್ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.