ಬಿಗ್ ಬಾಸ್ (Bigg Boss Kannada) ಖ್ಯಾತಿಯ ತೇಜಸ್ವಿನಿ ಪ್ರಕಾಶ್ (Tejaswini Prakash) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಸೀಮಂತ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಹಳದಿ ಬಣ್ಣದ ಬಾರ್ಡರ್ ಇರುವ ಗಿಳಿ ಹಸಿರು ಸೀರೆಯುಟ್ಟು ತೇಜಸ್ವಿನಿ ಮುದ್ದಾಗಿ ಕಾಣಿಸಿದ್ದಾರೆ. ಪತಿ ಜೊತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬೋಲ್ಡ್ ಫೋಟೋ ಹಾಕಿ, ಹನಿಮೂನ್ ಫೋಟೋ ಅಲ್ಲ ಎಂದು ಸ್ಪಷ್ಟನೆ ನೀಡಿದ ಪರಿಣಿತಿ
ಕೆಲ ದಿನಗಳ ಹಿಂದೆ ಬೇಬಿ ಬಂಪ್ ಫೋಟೋ ಶೇರ್ ಮಾಡಿ ಪತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಟಿ ಶುಭಕೋರಿದ್ದರು. ನಮ್ಮ ಮಗು ಸಂತೋಷದಿಂದ ಹೊಳೆಯುತ್ತಿದ್ದು, ನಾವು ನಮ್ಮ ಜೀವನದ ಅತ್ಯಂತ ಅಮೂಲ್ಯ ಉಡುಗೊರೆಯನ್ನು ಸ್ವೀಕರಿಸಲಿದ್ದೇವೆ. ಜನ್ಮದಿನದ ಶುಭಾಶಯಗಳು ಗಂಡ, ನೀವು ನನಗೆ ತೋರಿದ ಪ್ರೀತಿ, ಕಾಳಜಿ, ವಾತ್ಸಲ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮನ್ನು ನನ್ನ ಪತಿಯಾಗಿ ಹೊಂದಲು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಎಂದು ತೇಜಸ್ವಿನಿ ಬರೆದುಕೊಂಡಿದ್ದರು.
View this post on Instagram
ಕಳೆದ ವರ್ಷ ಮಾರ್ಚ್ 20ರಂದು ಫಣಿ ವರ್ಮಾ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನಲ್ಲಿ ಸರಳವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ:‘ಶಾಖಾಹಾರಿ’ ಫಸ್ಟ್ ಲುಕ್ ರಿಲೀಸ್- ಹೇಗಿದೆ ರಂಗಾಯಣ ರಘು ಲುಕ್?
ನನ್ನರಸಿ ರಾಧೆ, ನಿಹಾರಿಕಾ ಸೀರಿಯಲ್ ಮತ್ತು ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೇಜಸ್ವಿನಿ ಪ್ರಕಾಶ್ ನಟಿಸಿದ್ದಾರೆ. ದರ್ಶನ್ (Darshan) ನಟನೆಯ ಗಜ (Gaja) ಸಿನಿಮಾದಲ್ಲಿ ತೇಜಸ್ವಿನಿ ನಟನೆ ಅಭಿಮಾನಿಗಳ ಗಮನ ಸೆಳೆದಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]