ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada) ಮೂಲಕ ಮನೆ ಮಾತಾದ ನಟಿ ತೇಜಸ್ವಿನಿ ಪ್ರಕಾಶ್ (Tejaswini Prakash) ಇದೀಗ ಬೇಬಿ ಬಂಪ್ ಫೋಟೋಶೂಟ್ ಶೇರ್ ಮಾಡಿ ಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ನಮ್ಮ ಮಗು ಸಂತೋಷದಿಂದ ಹೊಳೆಯುತ್ತಿದ್ದು, ನಾವು ನಮ್ಮ ಜೀವನದ ಅತ್ಯಂತ ಅಮೂಲ್ಯ ಉಡುಗೊರೆಯನ್ನು ಸ್ವೀಕರಿಸಲಿದ್ದೇವೆ. ವಿಶೇಷವಾಗಿ ಜನ್ಮದಿನದ ಶುಭಾಶಯಗಳು ಗಂಡ, ನೀವು ನನಗೆ ತೋರಿದ ಪ್ರೀತಿ, ಕಾಳಜಿ, ವಾತ್ಸಲ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮನ್ನು ನನ್ನ ಪತಿಯಾಗಿ ಹೊಂದಲು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಎಂದು ತೇಜಸ್ವಿನಿ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಮಾರ್ಚ್ 20ರಂದು ಪನಿ ಶರ್ಮಾ (Phani Sharma) ಜೊತೆ ನಟಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಸರಳವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಇತ್ತೀಚೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗುಡ್ ನ್ಯೂಸ್ ಅನ್ನು ನಟಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
ನನ್ನರಸಿ ರಾಧೆ (Nannarasi Radhe), ನಿಹಾರಿಕಾ (Niharika) ಸೀರಿಯಲ್ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೇಜಸ್ವಿನಿ ಪ್ರಕಾಶ್ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]