Connect with us

Bengaluru City

ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

Published

on

ಬೆಂಗಳೂರು: ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿದ ಕೂಡಲೇ ಅನೇಕ ನಟಿಯರು ಅವರ ಬೆಂಬಲಕ್ಕೆ ನಿಂತಿದ್ದರೂ, ಆದರೆ ಈಗ ಸ್ಯಾಂಡಲ್‍ವುಡ್ ಹಿರಿಯ ನಟಿ ತಾರಾ ಅವರು ಅರ್ಜುನ್ ಸರ್ಜಾ ಮೇಲೆ ಬಂದಿರುವ ಮೀಟೂ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಟಿ ತಾರಾ ಅವರು ಅರ್ಜುನ್ ಸರ್ಜಾ ಪರ ವಿಡಿಯೋ ಮೂಲಕ ಮಾತನಾಡಿ ನಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. “ಈಗಾಗಲೇ ಮೀಟೂ ಎಂಬುದು ಕನ್ನಡ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಇದೊಂದು ಹೆಣ್ಣು ಮಗಳಿಗೆ ಶಕ್ತಿಯಾಗಿ, ಧೈರ್ಯವಾಗಿ ಸಹಕಾರಿಯಾಗಿದೆ. ನಾನು ಒಬ್ಬ ಹೆಣ್ಣು ಮಗಳಾಗಿ, ನನಗೆ ಇದರ ಬಗ್ಗೆ ಗೌರವಿದೆ” ಎಂದ್ರು.

ಹಿರಿಯ ಕಲಾವಿದ ನಟ ಅರ್ಜುನ್ ಸರ್ಜಾ ಅವರ ಬಗ್ಗೆ ಶೃತಿ ಹರಿಹರನ್ ಮಾತನಾಡಿದ್ದಾರೆ. ಅದರ ಬಗ್ಗೆ ನನ್ನ ಅಭಿಪ್ರಾಯವೆಂದರೆ, ನಾನು ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿದ್ದೇನೆ. ಅವರ ಕುಟುಂಬದ ಪರಿಚಯ ಬಹಳಷ್ಟಿದೆ. ಸರ್ಜಾ ಅವರು ನಿಜವಾಗಿಯೂ ಒಳ್ಳೆಯ ಸಹನಟ. ಸರ್ಜಾ ಸಂಭಾವಿತ ಕುಟುಂಬದಿಂದ ಬಂದವರು. ನನಗೆ ಯಾವುದೇ ರೀತಿಯಾಗಿ ಅವರು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡ ಅನುಭವ ಆಗಿಲ್ಲ ಎಂದು ಹೇಳಿದ್ದಾರೆ.

ಶೃತಿ ಹರಿಹರನ್ ಹೇಳುತ್ತಿರುವುದು ಸುಳ್ಳು ಅಂತಲೂ ಹೇಳುತ್ತಿಲ್ಲ. ಯಾಕೆಂದರೆ ಅವರಿಗಾದ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅವರ ಬಗ್ಗೆ ನಾನು ಅಭಿಪ್ರಾಯ ಕೊಡುವುದಕ್ಕೆ ಆಗಲ್ಲ. ನಾನು ಏನು ಹೇಳಲು ಇಷ್ಟನೂ ಪಡುವುದಿಲ್ಲ. ಅವರ ಹೇಳಿಕೆ, ಅಭಿಪ್ರಾಯದ ಬಗ್ಗೆ ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳುವುದು ಸರಿ ಎಂಬುದು ನನ್ನ ಭಾವನೆಯಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗ ಅನ್ನುವುದು ನಮ್ಮ ಮನೆ, ಇಲ್ಲಿ ಎಲ್ಲ ಹೆಣ್ಣು ಮಕ್ಕಳಿಗೂ ಒಳ್ಳೆಯದು ಆಗಲಿ. ನಮ್ಮ ಮನೆಯಲ್ಲಿ ಎಲ್ಲರೂ ಹೀಗೇ ಅಣ್ಣ-ತಮ್ಮಂದಿರಾಗಿ, ಅಕ್ಕ-ತಂಗಿಯರಾಗಿ ಇರುತ್ತೇವೋ ಹಾಗೆಯೇ ಸಿನಿಮಾರಂಗದಲ್ಲೂ ಒಂದು ಕುಟುಂಬದ ಸದಸ್ಯರಂತೆ ಇರಬೇಕು ಅನ್ನೋದು ನನ್ನ ಭಾವನೆ ಎಂದು ತಾರಾ ಅವರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *