ಹಿರಿಯ ನಟಿ ತಾರಾ ಅನುರಾಧಾ (Tara Anuradha) ಅವರು ಕನಸಿನ ಮನೆಗೆ (House Warming) ಕಾಲಿಟ್ಟಿದ್ದಾರೆ. ನಟಿಯ ಮನೆಯ ಗೃಹಪ್ರವೇಶ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ (Sandalwood) ಕಲಾವಿದರು ಭಾಗವಹಿಸಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಅಮರನ್’ ಸಕ್ಸಸ್ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ಸಾಯಿ ಪಲ್ಲವಿ
ಬೆಂಗಳೂರಿನಲ್ಲಿ ನಟಿ ಲಕ್ಷುರಿ ಮನೆಯನ್ನು ಕಟ್ಟಿಸಿದ್ದಾರೆ. ಈ ಸಂಭ್ರಮದಲ್ಲಿ ನಟಿ ಮಾಲಾಶ್ರೀ, ಸೋನು ಗೌಡ, ಭಾವನಾ ರಾವ್, ಅಂಜಲಿ, ಸುಧಾ ಬೆಳವಾಡಿ, ಶ್ರುತಿ, ಪೂಜಾ ಗಾಂಧಿ, ಪದ್ಮಾವಾಸಂತಿ, ಸುಧಾರಾಣಿ, ಭಾರತಿ ವಿಷ್ಣುವರ್ಧನ್, ಅನುಪ್ರಭಾಕರ್, ಕಾರುಣ್ಯ ರಾಮ್, ವೀಣಾ ಸುಂದರ್, ಗುರುಕಿರಣ್ ಪತ್ನಿ, ಮಾಳವಿಕಾ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
- Advertisement
- Advertisement
ಭಾವನಾ ರಾವ್ ಮತ್ತು ಸುಧಾರಾಣಿ ಪುತ್ರಿ ಜೊತೆಯಾಗಿ ಕುಣಿದು ಕುಪ್ಪಳಿಸಿದ್ದಾರೆ. ವಿವಿಧ ಹಾಡುಗಳಿಗೆ ಅವರು ಡ್ಯಾನ್ಸ್ ಮಾಡಿದ್ದಾರೆ.
ಈ ಸಂಭ್ರಮದಲ್ಲಿ ಮತ್ತೊಂದು ಹೈಲೆಟ್ ಅಂದರೆ ತಾರಾ ಜೊತೆ ಸುಧಾರಾಣಿ ಹೆಜ್ಜೆ ಹಾಕಿರೋದು. ಬಳಿಕ ಮಾಲಾಶ್ರೀ, ಕಾರುಣ್ಯ ಸೇರಿದಂತೆ ಡ್ಯಾನ್ಸ್ ಮಾಡುತ್ತ ಎಂಜಾಯ್ ಮಾಡಿರುವ ತುಣುಕು ಅಭಿಮಾನಿಗಳ ಗಮನ ಸೆಳೆದಿದೆ.
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ತಾರಾ ಕನಸಿನ ಮನೆಗೆ ಕಾಲಿಟಿರೋದಕ್ಕೆ ಫ್ಯಾನ್ಸ್ ಶುಭಕೋರಿದ್ದಾರೆ.