‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರನಡೆದಿರೋದು ನಿಜಾನಾ? ತನ್ವಿ ರಾವ್‌ ಸ್ಪಷ್ಟನೆ

Public TV
2 Min Read
tanvi rao 1 1

ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಟ್ರಯೋ ಪ್ರೇಮಕಥೆ ಅದ್ಭುತವಾಗಿ ತೆರೆಯ ಮೇಲೆ ಮೋಡಿ ಮಾಡ್ತಿತ್ತು. ಹೀಗಿರುವಾಗ ಕೀರ್ತಿ ಪಾತ್ರಧಾರಿ ತನ್ವಿ ರಾವ್ (Tanvi Rao) ಅವರು ಈ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ನಿಜಾನಾ? ಈಗ ನಟಿ ತನ್ವಿ ಅವರೇ ಸ್ಪಷ್ಟಪಡಿಸಿದ್ದಾರೆ.

tanvi rao 1

ವೈಷ್ಣವ್- ಕೀರ್ತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹೀರೋ ತಾಯಿ ಕಾವೇರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ತನ್ನ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಹುಡುಗಿ ಜೊತೆ ಮದುವೆ ಮಾಡಿಸುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೋಸ್ಕರ ಕೀರ್ತಿ ಹಂಬಲಿಸುತ್ತಿದ್ದಾಳೆ. ಏನಾದರೂ ಮಾಡಿ ನನ್ನ ವೈಷ್‌ನನ್ನು ಪಡೆದುಕೊಳ್ಳಬೇಕು ಅಂತ ಕೀರ್ತಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಹೀಗಿರುವಾಗ ಈ ನಡುವೆ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತನ್ವಿ ರಾವ್ ಅವರು ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿಗೆ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ವೀಟಿ ಫ್ಯಾನ್ಸ್‌ಗೆ ಇದು ಬೇಸರದ ಸಂಗತಿ- ಅನುಷ್ಕಾ ಶೆಟ್ಟಿ ಬಗ್ಗೆ ಏನಿದು ಸುದ್ದಿ?

tanvi rao 1 2

ಕೀರ್ತಿ (Keerthi)  ಪಾತ್ರಧಾರಿ ತನ್ವಿ ಧಾರಾವಾಹಿಯಿಂದ ಹೊರ ಬಂದಿರೋದರ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಾನು ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಬಿಡಲಿದ್ದೇನೆ ಎಂಬ ವದಂತಿ ಕೇಳ್ಪಟ್ಟೆ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಕೌಂಟ್‌ನಲ್ಲಿ ತಿಳಿಸುತ್ತೇನೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ತಾನು ಕೀರ್ತಿ ಪಾತ್ರವನ್ನು, ಸೀರಿಯಲ್ ಅನ್ನು ಬಿಡುತ್ತಿಲ್ಲ ಈ ವದಂತಿ ಸುಳ್ಳು ಎಂದು ತನ್ವಿ ರಾಮ್ ಸ್ಪಷ್ಟನೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು. ಮುಂದೆಯೂ ಕೂಡ ನಮ್ಮ ಸೀರಿಯಲ್‌ ಅನ್ನ ಹೀಗೆ ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.

‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ರಾವ್ ನಟಿಸಿದ್ದರು. ತನ್ವಿ ರಾವ್ ಅವರು ಮೊದಲು ಕನ್ನಡದಲ್ಲಿ ‘ಆಕೃತಿ’, ಆ ನಂತರ ‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. Gulmohar ಎನ್ನುವ ಸಿನಿಮಾದಲ್ಲಿ ಕೂಡ ತನ್ವಿ ರಾವ್ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಶರ್ಮಿಳಾ ಠಾಗೋರ್, ಮನೋಜ್ ಭಾಜ್‌ಪೇಯಿ ಮುಂತಾದವರು ನಟಿಸಿದ್ದರು. ಈ ಹಿಂದೆ ಮಾಧುರಿ ದೀಕ್ಷಿತ್ ಜೊತೆಗೆ ‘ಗುಲಾಬ್ ಗ್ಯಾಂಗ್’ (Gulab Gang) ಸಿನಿಮಾದಲ್ಲಿ ನಟಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಮಾಧುರಿ ದೀಕ್ಷಿತ್ (Madhuri Dixit) ಅವರ ಅಭಿಮಾನಿಯಾಗಿದ್ದ ತನ್ವಿ ರಾವ್‌ಗೆ ಈ ಸಿನಿಮಾ ತುಂಬಾನೇ ಸ್ಪೆಷಲ್.

Share This Article