ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಇದೀಗ ರೋಚಕ ತಿರುವಿನಲ್ಲಿದೆ. ತನ್ವಿ ರಾವ್ (Tanvi Rao) ಅಲಿಯಾಸ್ ಕೀರ್ತಿ (Keerthi) ಪಾತ್ರಧಾರಿ ಈ ಸೀರಿಯಲ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೀರ್ತಿ ಪಾತ್ರ ಸತ್ತಿದೆ ಎಂದು ನಂಬಿದ್ದ ವೀಕ್ಷಕರಿಗೆ ಇದೀಗ ಮತ್ತೆ ಈ ಪಾತ್ರ ರೀ ಎಂಟ್ರಿ ಕೊಟ್ಟಿರೋದು ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಕೀರ್ತಿ ಕಮ್‌ಬ್ಯಾಕ್ ಕುರಿತಾದ ಪ್ರೋಮೋ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ
‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಕೀರ್ತಿ ಬದುಕಿರುವುದು ನಿಜ. ಅವಳು ಕಾವೇರಿ ಮುಂದೆ ಬಂದು ನಿಂತು ಮಾತಾಡುತ್ತಿರುವುದು ಕೂಡ ನಿಜ. ಕೀರ್ತಿ ಸತ್ತಿದ್ದಾಳಾ? ಅಥವಾ ಬದುಕಿದ್ದಾಳಾ? ಅವಳು ಬಂದಿರೋದು ನಿಜವಾ? ಅಥವಾ ಭ್ರಮೆಯಾ? ಎಂದು ತಿಳಿದುಕೊಳ್ಳಲಾಗದೆ ವೀಕ್ಷಕರು ಗೊಂದಲದಲ್ಲಿದ್ದರು. ಆದರೆ ಇದೀಗ ಉತ್ತರ ಸಿಕ್ಕಿದೆ. ನಾಯಕಿ ಲಕ್ಷ್ಮಿ ಪಾತ್ರಧಾರಿ ರಾವಣ ದಹನ ನಾಟಕ ಮಾಡುವ ಸಂದರ್ಭದಲ್ಲಿ ಸ್ವತಃ ಅವಳೇ ಸುಟ್ಟು ಸತ್ತು ಹೋಗಿದ್ದಾಳೆ ಎಂದು ಕಾವೇರಿ ನಂಬಿಕೊಂಡಿದ್ದಾಳೆ. ಎಲ್ಲರಿಗೂ ಹಾಗೇ ನಂಬಿಕೆ ಇದೆ. ಆದರೆ ಆ ಬಗ್ಗೆ ಇನ್ನು ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ. ಆದರೆ ಈಗ ನಾಯಕ ವೈಷ್ಣವ್ ಲಕ್ಷ್ಮಿ ಬದುಕಿದ್ದಾಳೆ ಎಂದೇ ಅಂದುಕೊಂಡಿದ್ದಾನೆ.
ಲಕ್ಷ್ಮಿಗಾಗಿ ಮನೆಯಲ್ಲಿ ಕಾರ್ಯಕ್ರಮ, ಆರತಿ ಎಲ್ಲ ತಯಾರಿ ನಡೆದಿದೆ. ಆದರೆ ಲಕ್ಷ್ಮಿ ಮಾತ್ರ ಮನೆಯಲ್ಲಿಲ್ಲ. ವೈಷ್ಣವ್ ತನ್ನ ಹೆಂಡತಿ ಮಹಾಲಕ್ಷ್ಮಿ ಬರುತ್ತಾಳೆ ಎಂದು ಕಾತರದಿಂದ ಕಾಯುತ್ತಿದ್ದಾನೆ. ಅವಳಿಗಾಗಿ ಸೀರೆಯನ್ನು ಕೂಡ ತಂದಿದ್ದಾನೆ. ಆದರೆ ಲಕ್ಷ್ಮಿ ಮಾತ್ರ ಎಲ್ಲೂ ಇಲ್ಲ. ಕೀರ್ತಿ ಆಗಾಗ ಕಾವೇರಿಗೆ ಕಾಣಿಸಿಕೊಳ್ಳುತ್ತಾ ಇದ್ದವಳು ಈಗ ಎಲ್ಲರಿಗೂ ಕೀರ್ತಿ ಕಾಣಿಸಿಕೊಂಡಿದ್ದಾಳೆ.
View this post on Instagram
ವೈಷ್ಣವ್ ಮನೆಯ ಎಲ್ಲರೂ ಕೀರ್ತಿಯನ್ನು ನೋಡಿ ಶಾಕ್ ಆಗಿದ್ದಾರೆ. ಸತ್ತು ಹೋದ ಕೀರ್ತಿ ಬದುಕಿ ಬಂದದ್ದು ಹೇಗೆ? ಎಂದು ಎಲ್ಲರಿಗೂ ಆಶ್ಚರ್ಯ ಆಗುತ್ತಿದೆ. ಆದರೆ ಕೀರ್ತಿ ಮಾತ್ರ ತನಗೆ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಮೈಗೆ ಒಂದೂ ಗಾಯದ ಕಲೆಯೂ ಇಲ್ಲದ ರೀತಿ ಮತ್ತೆ ಮರಳಿ ಬಂದಿದ್ದಾಳೆ. ಇಂದು ಈ ಮನೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೀರ್ತಿ ಹೇಳುತ್ತಿದ್ದಾಳೆ. ಖಳನಾಯಕಿ ಕಾವೇರಿ ಅಟ್ಟಹಾಸಕ್ಕೆ ಫುಲ್ ಸ್ಟಾಪ್ ಇಡಲು ಕೀರ್ತಿ ಎಂಟ್ರಿ ಕೊಟ್ಟಾಗಿದೆ. ಕೀರ್ತಿ ಆಗಮನ ಅಕ್ಷರಶಃ ಕಾವೇರಿಗೂ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೂ ಕೀರ್ತಿ ಅನುಪಸ್ಥಿತಿಗೆ ಕಾರಣವಾಗಿರೋ ಸೂತ್ರಧಾರಿ ಈ ಕಾವೇರಿ. ಹಾಗಾಗಿ ಮುಂದೆ ಈ ಸೀರಿಯಲ್‌ನಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂದು ಕಾದುನೋಡಬೇಕಿದೆ. ‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.