ಬಿಟೌನ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಮೀಟೂ ಆರೋಪ ಮಾಡಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ದತ್ತ, ಇದೀಗ ಮತ್ತೊಮ್ಮೆ ಗುಡುಗಿದ್ದಾಳೆ. ಮೀಟೂ ಆರೋಪ ಮಾಡಿದ್ದಕ್ಕೆ ತನಗಾದ ಅನ್ಯಾಯವನ್ನು ಮತ್ತೆ ತೆರೆದಿಟ್ಟಿದ್ದಾರೆ. ಈ ಆರೋಪದಿಂದ ಅವರು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಮನದಾಳವನ್ನು ಬಿಚ್ಚಿಟ್ಟಿದ್ದಾರೆ.
ತನುಶ್ರೀ ದತ್ತ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ ನಟಿ. ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾದರು. ಆರೋಪ ಪ್ರತ್ಯಾರೋಪಗಳು ನಡೆದು ಆನಂತರ ಅನೇಕರು ಇವರಿಗೆ ಕಿರುಕುಳ ನೀಡಿದರಂತೆ. ಬಾಲಿವುಡ್ ನಲ್ಲಿ ಬೆಳೆಯಲಿಕ್ಕೆ ಬಿಡಲಿಲ್ಲವಂತೆ. ಬಾಲಿವುಡ್ ಮಾಫಿಯಾ ತಮ್ಮ ವೃತ್ತಿ ಬದುಕನ್ನೇ ಕತ್ತಲಿನಲ್ಲಿ ಇಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ಕೆಲವರನ್ನು ಮತ್ತೆ ಟೀಕಿಸಿದ್ದಾರೆ. ಆದರೆ, ಯಾವ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ ತನುಶ್ರೀ ದತ್ತ. ಇವತ್ತಿಗೂ ಅವರು ಮೀಟು ಪ್ರಕರಣದಿಂದಾಗಿ ಸಂಕಟಗಳನ್ನು ಅನುಭವಿಸುವುದು ತಪ್ಪಿಲ್ಲ ಎಂದಿದ್ದಾರೆ ತನುಶ್ರೀ.