ಸಾಮಾನ್ಯವಾಗಿ ನಟ- ನಟಿಯರು ತಮ್ಮ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಿನಿಮಾ ಸೋಲಿನ ಬಗ್ಗೆ ತುಟಿಬಿಚ್ಚಲು ಹಿಂದುಮುಂದು ನೋಡುತ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಾವು ನಟಿಸಿದ ಸಿನಿಮಾಗಳೆಲ್ಲಾ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ನಟಿಸಿದ ಕೆಟ್ಟ ಸಿನಿಮಾಗಳ ಪಟ್ಟಿ ಬಿಚ್ಚಿಡುತ್ತಾರೆ. ಇದೀಗ ತಮನ್ನಾ, ತಾವು ನಟಿಸಿದ ಕೆಟ್ಟ ಸಿನಿಮಾ ಇದು ಬೆರಳು ಮಾಡಿ ತೋರಿಸಿದ್ದಾರೆ. ಮಿಲ್ಕಿ ಬ್ಯೂಟಿ ಬಿಟ್ಟ ಬಾಣಕ್ಕೆ ವಿಜಯ್ ದಳಪತಿ (Thalapathy Vijay) ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮನ್ನಾ (Tamannah Bhatia) ಮತ್ತೆ ಲೈಮ್‌ಲೈಟ್‌ಗೆ ಮರಳಿದ್ದಾರೆ. ಕಾರಣ ರಜನಿಕಾಂತ್ (Rajanikanth) ಜೊತೆಗಿನ ಜೈಲರ್ (Jailer) ಸಿನಿಮಾ. ಕಾವಾಲಾ ಸಾಂಗ್ ಭರ್ಜರಿ ಹಿಟ್ ಆಗಿದೆ. ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಿದೆ. ಈ ಹೊತ್ತಲ್ಲೇ ತಮ್ಮಿಡೀ ಚಿತ್ರಜೀವನದ ಕೆಟ್ಟ ಸಿನಿಮಾ ಯಾವುದು ಅನ್ನೋ ಸುದ್ದಿ ಬಿಚ್ಚಿಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನಿದೆ ತಮನ್ನಾ ಬಿಚ್ಚಿಟ್ಟ ಕಥೆಯಲ್ಲಿ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿ ವಿಚಿತ್ರ ಕ್ಯಾಪ್ಷನ್ ಕೊಟ್ಟ ದೀಪಿಕಾ
ಒಂದೇ ಒಂದು ಸ್ಟೆಪ್ ಭರ್ಜರಿ ಒಂದು ತಿಂಗಳಿಂದ ಟ್ರೆಂಡ್ ಸೃಷ್ಟಿ ಮಾಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕಾವಾಲಾ (Kaavala Song) ಹಾಡಿಗೆ ತಮನ್ನಾ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಸ್ಟೆಪ್‌ಗೆ ಫಿದಾ ಆದವರೆಷ್ಟೋ ಮಂದಿಯಿದ್ದಾರೆ. ಅಲ್ಲಿಂದ ತಮನ್ನಾ ಚಾರ್ಮ್ ಮತ್ತೆ ಚಾಲ್ತಿಗೆ ಬಂದಿದೆ. ಸಿನಿ ಕರಿಯರ್ ಆರಂಭದಲ್ಲಿ ತಮನ್ನಾಗೆ ಅದೆಷ್ಟು ಸ್ಟಾರ್‌ಡಂ ಇತ್ತೋ ಅದು ಮತ್ತೆ ಮರಳಿದೆ. ಈ ಹೊತ್ತಲ್ಲೇ ತಮಿಳಿನ ವಿಜಯ್ ಫ್ಯಾನ್ಸ್ ಕಣ್ಣು ಕೆಂಪು ಮಾಡಿಕೊಳ್ಳುವಂಥಹ ಮಾತನಾಡಿದ್ದಾರೆ.
‘ಜೈಲರ್’ ಸಿನಿಮಾ ರಿಲೀಸ್ ಹೊತ್ತಲ್ಲಿ ಮಾಧ್ಯಮಕ್ಕೆ ಸಂದರ್ಶನ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ತಮನ್ನಾ. ಈ ಹೊತ್ತಲ್ಲಿ ತಮನ್ನಾಗೆ ಕೆರಿಯರ್‌ನಲ್ಲಿ ಕೆಟ್ಟ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಗೆ ತಮನ್ನಾ ಉತ್ತರ ದಳಪತಿ ವಿಜಯ್ ಫ್ಯಾನ್ಸ್ ಗರಂ ಆಗುವಂತೆ ಮಾಡಿದೆ. ಕಾರಣ ತಮನ್ನಾ ಕೆರಿಯರ್‌ನ ಕೆಟ್ಟ ಸಿನಿಮಾ 2010ರ ‘ಸುರ’ (Sura Film) ಎಂಬುದನ್ನ ನೇರವಾಗಿ ಹೇಳಿದ್ದಾರೆ. ಯಾಕಂದ್ರೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಒಟ್ನಲ್ಲಿ ಬೋಲ್ಡ್ ಮಾತಿನಿಂದಾಗಿ ತಮನ್ನಾ, ವಿಜಯ್ ಫ್ಯಾನ್ಸ್ ಮುಂದೆ ನಿಷ್ಠುರವಾಗಿದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಮಾಡೋ ಸಂದರ್ಭ ಬಂದಾಗ ಪರಿಸ್ಥಿತಿ ಮಿತಿಮೀರಲೂಬಹುದು ಅಂತಿದ್ದಾರೆ ಸಿನಿಪಂಡಿತರು.