ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Batia) ಸೌತ್ ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಇದೀಗ ನನಗೆ ಮಕ್ಕಳನ್ನು (Children) ಮಾಡಿಕೊಳ್ಳೋಕೆ ಭಯ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್
ಇತ್ತೀಚೆಗೆ ತಮನ್ನಾ ನೀಡಿದ ಸಂದರ್ಶನವೊಂದರಲ್ಲಿ, ಮದುವೆ ಮತ್ತು ಮಕ್ಕಳು ಮಾಡಿಕೊಳ್ಳುವ ಬಗ್ಗೆ ಓಪನ್ ಆಗಿ ನಟಿ ಮಾತನಾಡಿದ್ದಾರೆ. ತಾಯಂದಿರು, ತಮ್ಮ ಮಕ್ಕಳಿಗೆ ತಮ್ಮ ಸರ್ವಸ್ವವನ್ನೇ ನೀಡ್ತಾರೆ. ಮಕ್ಕಳಿಗೆ ಅಷ್ಟೊಂದು ಪ್ರೀತಿ, ಕಾಳಜಿ, ಆರೈಕೆ ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಪಾಲಕರು ನನಗೆ ಸಿಕ್ಕಾಪಟ್ಟೆ ಪ್ರೀತಿ ನೀಡಿದ್ದಾರೆ. ಅವರು ಕೇರ್ ಮಾಡೋದನ್ನು ನೋಡಿದ್ದರೆ, ಪೇರೆಂಟಿಂಗ್ ಡಿಗ್ರಿ ಪಡೆದಿದ್ದಾರೆ ಅನ್ನಿಸುತ್ತದೆ. ಆದರೆ ಇದೆಲ್ಲಾ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಅನ್ನಿಸುತ್ತದೆ ಎಂದಿದ್ದಾರೆ.
ಮಕ್ಕಳಿಗೆ ಜನ್ಮ ನೀಡಿದ ನಂತರ ಏನಾಗಬಹುದು ಎಂಬುದನ್ನು ಊಹಿಸಿಕೊಂಡರೆ ನನಗೆ ಭಯವಾಗುತ್ತದೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ಮಿಲ್ಕಿ ಬ್ಯೂಟಿ ಮುಂದೆ ಮದುವೆ ಆದ್ರೂ ಮಕ್ಕಳನ್ನು ಮಾಡ್ಕೊಳ್ಳೋದಿಲ್ವಾ ಎನ್ನುವ ಪ್ರಶ್ನೆ ಇದೀಗ ಫ್ಯಾನ್ಸ್ ತಲೆಯಲ್ಲಿ ಕೊರೆಯೋಕೆ ಶುರುವಾಗಿದೆ. ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?
ಅಂದಹಾಗೆ, ತಮನ್ನಾ ಸದ್ಯ ವಿಜಯ್ ವರ್ಮಾ (Vijay Varma) ಡೇಟಿಂಗ್ ಮಾಡುತ್ತಿದ್ದಾರೆ. ಮದುವೆ ಅದ್ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.