ಕೆರಿಯರ್‌ನಲ್ಲಿ ಪ್ರಚಾರ ಬೇಕು ಅಂದ್ರೆ ಇದನ್ನೆಲ್ಲಾ ಮಾಡಬೇಕು- ತಮನ್ನಾ ಭಾಟಿಯಾ

Public TV
2 Min Read
tamannaah 2

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಾವ್ಯಾಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು? ತಾವು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂದು ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

tamannah

ತಮನ್ನಾ ಭಾಟಿಯಾ ಅವರು ಕಳೆದ ವರ್ಷ 18 ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ನೋ ಲಿಪ್ ಲಾಕ್ ಎಂಬ ತಮ್ಮ ರೂಲ್ಸ್‌ ಬ್ರೇಕ್ ಮಾಡಿ ಸಖತ್ ಹಾಟ್ ಆಗಿ ತಮನ್ನಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ಲಸ್ಟ್ ಸ್ಟೋರಿಸ್ 2, ಜೀ ಕರ್ದಾ(Jee Kardha) ಪ್ರಾಜೆಕ್ಟ್. ಈ ಎರಡರಲ್ಲೂ ತಮನ್ನಾ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

tamannaah bhatia

ಸಂದರ್ಶನವೊಂದರಲ್ಲಿ ತಮನ್ನಾ ಮಾತನಾಡಿ ನಾವು ಬದಲಾಗದಿದ್ದರೆ ಎಲ್ಲಿ ಆರಂಭಿಸಿದ್ದೆವೋ ಅಲ್ಲೇ ನಿಂತುಬಿಡುತ್ತೇವೆ. ಆ ರೀತಿ ನಿಂತು ಬಿಡಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ. ಎಲ್ಲರೂ ಕೆರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿ ಪ್ರಮೋಷನ್ ಇದ್ದಂತೆ ನಮ್ಮ ಕೆಲಸದಲ್ಲೂ ಇದೆ. ಪ್ರಮೋಷನ್‌ಗಾಗಿ ಸ್ವಲ್ಪ ಬ್ರಾಡ್ ಆಗಿ ಆಲೋಚಿಸಬೇಕು. ಹೊಸ ಹೊಸ ಪ್ರಯತ್ನ ಮಾಡಬೇಕು. ಆಗ ಮಾತ್ರ ಜರ್ನಿ ಮತ್ತಷ್ಟು ಸುದೀರ್ಘವಾಗಿ ಚೆನ್ನಾಗಿ ಇರುತ್ತದೆ ಎಂದು ತಮನ್ನಾ ಹೇಳಿದ್ದಾರೆ.

tamannaah bhatia 3

ನಟಿ ತಮನ್ನಾ ಇತ್ತೀಚಿನ ಸಿನಿಮಾಗಳಲ್ಲಿ ಅವರ ಲುಕ್ ಬದಲಾಗಿದೆ. ಇದು ಆಕೆಯ ಅಭಿಮಾನಿಗಳಿಗೂ ಇದು ಬೇಸರ ತರಿಸಿತ್ತು. ಈ ರೀತಿ ಎಲ್ಲಾ ತೆರೆಮೇಲೆ ಕಾಣಿಸಿಕೊಳ್ಳಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ನಮ್ಮ ಸುತ್ತ ಜನ ಏನೇನೋ ಮಾತನಾಡುತ್ತಾರೆ. ಅದರಲ್ಲಿ ಯಾವುದು ಸರಿ? ಯಾವುದು ತಪ್ಪು? ಎಂದು ತಿಳಿದುಕೊಳ್ಳಬೇಕು. ‘ಲಸ್ಟ್ ಸ್ಟೋರಿಸ್ 2’ ಬಗ್ಗೆ ಅಭಿಮಾನಿಗಳು ಹಾಗೂ ಕೆಲವರು ಬಹಳ ಚೆನ್ನಾಗಿದೆ ಎಂದರು. ಮುಖ್ಯವಾಗಿ ಮಹಿಳೆಯರು ಬಂದು ವೆಬ್ ಸೀರಿಸ್ ಬಗ್ಗೆ ಮೆಚ್ಚುಗೆ ಸೂಚಿಸಿದರು ಅಷ್ಟು ಸಾಕು ಎಂದು ರಿಯಾಕ್ಟ್ ಮಾಡಿದ್ದಾರೆ.

ನವ ನಟಿಯರ ನಡುವೆ ತಮನ್ನಾ ಎಲ್ಲೂ ಡಿಮ್ಯಾಂಡ್ ಕಮ್ಮಿಯಾಗದಂತೆ ಅವಕಾಶ ಎಂಬ ರೇಸ್‌ನಲ್ಲಿ ತಮನ್ನಾ ಮುಂಚೂಣಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಮೃಣಾಲ್ ಠಾಕೂರ್ ಎಂಬ ಈ ಬೇಡಿಕೆಯ ನಟಿಯರ ಮಧ್ಯೆ ‘ಕಾವಾಲಾ’ (Kavaala) ಬ್ಯೂಟಿ ಗಮನ ಸೆಳೆಯುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article