ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

Public TV
1 Min Read
TAAPSEE PANNU 2

ಬಾಲಿವುಡ್ ಬೆಡಗಿ ತಾಪ್ಸಿ ಪನ್ನು (Taapsee Pannu) ಅವರು ಮದುವೆಯ ಬಳಿಕವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮುಂಬೈನಲ್ಲಿ 4.33 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ. ಇದನ್ನೂ ಓದಿ:ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

TAAPSEE PANNU

ಮೂಲಗಳ ಪ್ರಕಾರ, ಸಹೋದರಿ ಶಗುನ್ ಪನ್ನು ಅವರೊಂದಿಗೆ ಸೇರಿ ಈ ಅಪಾರ್ಟ್‌ಮೆಂಟ್ (Apartment) ಖರೀದಿಸಿದ್ದಾರೆ. ಇದಕ್ಕೆ 4.33 ಕೋಟಿ ರೂ. ಪಾವತಿಸಿದ್ದಾರೆ. ಅವರ ಅಪಾರ್ಟ್‌ಮೆಂಟ್ ಒಟ್ಟು 1669 ಚದರ ಅಡಿ ವಿಸ್ತೀರ್ಣವಿದ್ದು, 2 ಕಾರು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.

taapsee

ಮೇ 15ರಂದು ಆಸ್ತಿ ನೋದಣಿ ಮಾಡಿಸಲಾಗಿದೆ. ಸಹೋದರಿ ಜೊತೆ ಸೇರಿ ಮುದ್ರಾಂಕ ಶುಲ್ಕ 21.65 ಲಕ್ಷ ರೂ. ಹಾಗೂ 30,000 ರೂ. ರಿಜಿಸ್ಟ್ರೇಷನ್ ಶುಲ್ಕವನ್ನೂ ಪಾವತಿಸಿದ್ದಾರೆ. ಸದ್ಯ ಹೊಸ ಮನೆ ಖರೀದಿಸಿರುವ ಖುಷಿಯಲ್ಲಿರುವ ತಾಪ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್

ಕಾಂಚನ 2, ಗೇಮ್ ಓವರ್, ಆರಂಭಂ, ಡುಂಕಿ, ತಪ್ಪಡ್, ಆಡುಕಲಾಂ ಸಿನಿಮಾಗಳಲ್ಲಿ ತಾಪ್ಸಿ ನಟಿಸಿದ್ದಾರೆ. ಗ್ಲ್ಯಾಮರ್‌ಗಿಂತ ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

Share This Article