ಕೊನೆಗೂ ಲೀಕ್ ಆಯ್ತು ತಾಪ್ಸಿ ಪನ್ನು ಮದುವೆ ವಿಡಿಯೋ

Public TV
1 Min Read
FotoJet 2

ಬಾಲಿವುಡ್ (Bollywood) ಬ್ಯೂಟಿ ತಾಪ್ಸಿ ಪನ್ನು (Taapsee Pannu) ಇತ್ತೀಚೆಗೆ ಸೀಕ್ರೆಟ್ ಮದುವೆಯಾಗಿರೋದು (Wedding) ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮದುವೆಯ ಒಂದೇ ಒಂದು ಫೋಟೋ ಲೀಕ್ ಆಗದಂತೆ ನಟಿ ನೋಡಿಕೊಂಡಿದ್ದರು. ಹೀಗಿದ್ದರೂ ಕೂಡ ನಟಿ ತಾಪ್ಸಿಯ ಮದುವೆ ವಿಡಿಯೋ ಇದೀಗ ಹೊರಬಿದ್ದಿದೆ. ಸಂತಸದಿಂದ ಮದುವೆ ದಿನ ವೇದಿಕೆ ಏರುತ್ತಿರುವ ನಟಿಯ ವಿಡಿಯೋ ಲೀಕ್‌ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

taapsee

10 ದಿನಗಳ ಹಿಂದೆ ತಾಪ್ಸಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

taapsee pannu 2

ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ.

10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಆದಷ್ಟು ಬೇಗ ನಟಿಯ ಮದುವೆಯ ಫೋಟೋ ರಿವೀಲ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article