ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.
ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.