ನಟಿ ಸ್ವಾತಿ ರೆಡ್ಡಿ ಡಿವೋರ್ಸ್ ವದಂತಿ: ನಟಿಯ ಅಚ್ಚರಿ ಪ್ರತಿಕ್ರಿಯೆ

Public TV
2 Min Read
Swathi Reddy 1

ಸಿನಿಮಾ ರಂಗದಲ್ಲಿ ಈಗ ಎಲ್ಲೆಲ್ಲೂ ಡಿವೋರ್ಸ್ ಸುದ್ದಿ. ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ, ನಿಹಾರಿಕಾ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ಕೊಟ್ಟಿದ್ದರೆ, ತೆಲುಗಿನ ಮತ್ತೋರ್ವ ನಟಿ ಸ್ವಾತಿ ರೆಡ್ಡಿ(Swathi Reddy) ಕೂಡ ಡಿವೋರ್ಸ್ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಸಮಂತಾ(Samantha), ನಿಹಾರಿಕಾ(Niharika) ಹಾದಿಯಲ್ಲೇ ಸ್ವಾತಿ ಕೂಡ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈವರೆಗೂ ಸ್ವಾತಿ ಮೌನಕ್ಕೆ ಶರಣಾಗಿದ್ದರು. ಇದೇ ಮೊದಲ ಬಾರಿಗೆ ವದಂತಿ ಬಗ್ಗೆ ಮಾತನಾಡಿದ್ದಾರೆ.

Swathi Reddy 3

ಡಿವೋರ್ಸ್ ಕುರಿತಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸ್ವಾತಿ ರೆಡ್ಡಿ, ‘ಇದೊಂದು ಅರ್ಥವಿಲ್ಲದ ಪ್ರಶ್ನೆ. ಈ ಕುರಿತು ಏನೂ ಮಾತನಾಡಲಾರೆ. ನನ್ನ ಖಾಸಗಿ ಬದುಕು ಮತ್ತು ಜೀವನದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಈಗಲೂ ಮಾತನಾಡಲು ಇಷ್ಟ ಪಡುವುದಿಲ್ಲ’ ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

swathi reddy 1

2015ರಲ್ಲಿ ‘ಡೆಂಜರ್’ (Danger) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸ್ವಾತಿ ರೆಡ್ಡಿ (Swathi Reddy) ಅವರು ಸಾಲು ಸಾಲಾಗಿ ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ರು. ಕಾರ್ತಿಕೇಯ, ತ್ರಿಪುರ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ನಟಿ ನೀಡಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ವಿಕಾಸ್ ವಾಸು (Vikas Vasu) ಜೊತೆ ಸ್ವಾತಿ ರೆಡ್ಡಿ ಮದುವೆಯಾದರು. ಪ್ರೀತಿಸಿದ ಹುಡುಗ ವಿಕಾಸ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.

Swathi Reddy 2

ಸಮಂತಾ, ನಿಹಾರಿಕಾ ಡಿವೋರ್ಸ್ ಪ್ಯಾಟರ್ನ್ ಅಂತೆಯೇ ಸ್ವಾತಿ ರೆಡ್ಡಿ ಹಾಗೇ ಮಾಡ್ತಿದ್ದಾರೆ. ಸ್ಯಾಮ್ ಮತ್ತು ನಿಹಾರಿಕಾ ದಾರಿಯನ್ನೇ ಸ್ವಾತಿ ರೆಡ್ಡಿ ಕೂಡ ಹಿಡಿದ್ರಾ ಎಂಬ ಅನುಮಾನ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪತಿ ವಿಕಾಸ್ ಜೊತೆಗಿನ ಫೋಟೋವನ್ನ ನಟಿ ಡಿಲೀಟ್ ಮಾಡಿದ್ದಾರೆ. ಸಮಂತಾ- ನಿಹಾರಿಕಾ ಕೂಡ ಹೀಗೆ ಮಾಡಿದ್ದರು. ಕೆಲ ತಿಂಗಳುಗಳ ನಂತರ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು.

 

ಅವರಂತೆಯೇ ಸ್ವಾತಿ ಮಾಡಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಪತಿ ಜೊತೆಗಿನ ಫೋಟೋವನ್ನ ಸ್ವಾತಿ ಡಿಲೀಟ್ ಮಾಡಿರೋ ಬೆನ್ನಲ್ಲೇ ಡಿವೋರ್ಸ್ (Divorce) ಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಅಷ್ಟಕ್ಕೂ ಇದು ನಿಜಾನಾ? ಎಂಬುದನ್ನ ನಟಿ ರಿಯಾಕ್ಟ್ ಮಾಡುವವರೆಗೂ ಕಾಯಬೇಕಿದೆ.

Web Stories

Share This Article