ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ (Fahad Ahamad) ಅವನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್
ಇತ್ತೀಚಿಗಷ್ಟೇ ಸ್ವರಾ- ಫಯಾದ್ ಜೋಡಿ ಮೊದಲ ರಾತ್ರಿಯನ್ನು ಆಚರಿಸಿದ್ದಾರೆ. ಸ್ವರಾ ಅವರ ತಾಯಿ ಮಲಗುವ ಕೋಣೆಯನ್ನು ಸುಂದರವಾಗಿ ಅಲಂಕರಿಸಿದರು. ಈ ಕುರಿತ ಫೋಟೋವನ್ನ ಸ್ವರಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದು ಕೂಡ ಈಗ ಟ್ರೋಲಿಗರ ಬಾಯೊಗೆ ಆಹಾರವಾಗಿದೆ. ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋವನ್ನ ಹಂಚಿಕೊಂಡಿದ್ದ ನಟಿಯ ಪೋಸ್ಟ್ ಸಖತ್ ಟ್ರೋಲ್ ಮಾಡಲಾಗುತ್ತಿದೆ.