ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೆ.23ರಂದು ಹೆಣ್ಣು ಮಗುವಿಗೆ (Baby Girl) ಸ್ವರಾ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ನ.24ಕ್ಕೆ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಸ್ಟಾರ್ ಕಲಾವಿದರ ಸಾಥ್
ಸ್ವರಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹೆಣ್ಣು ಮಗು ಮನೆಗೆ ಆಗಮನ ಆಗಿರುವ ಖುಷಿಯಲ್ಲಿದ್ದಾರೆ. ಮಗು ಜನಿಸಿ 3 ದಿನಗಳ ಬಳಿಕ ಈಗ ಸುದ್ದಿ ಹಂಚಿಕೊಂಡಿದ್ದಾರೆ. ಮುದ್ದು ಮಗಳಿಗೆ ‘ರಾಬಿಯಾ’ (Raabiyaa) ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
View this post on Instagram
ಸ್ವರಾ- ಫಹಾದ್ ಫೆ.16ರಂದು ಕೋರ್ಟ್ ಮ್ಯಾರೇಜ್ ಆಗಿದ್ದು, ಹೊಸ ಅತಿಥಿಯ ಆಗಮನವಾಗಿದೆ. ಹಲವು ವರ್ಷಗಳ ಡೇಟಿಂಗ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಗುರುಹಿರಿಯರ ಸಮ್ಮುಖದಲ್ಲಿ ಮತ್ತೆ ಹಿಂದೂ ಪದ್ಧತಿಯಂತೆ ಈ ಜೋಡಿ ಹಸೆಮಣೆ ಏರಿದ್ದರು. ಈ ಫೋಟೋಗಳು ಗಮನ ಸೆಳೆದಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]