ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಮಾಜಿ ಅತ್ತಿಗೆ ಚಾರು ಅಸೋಪಗೆ (Charu Asopa) ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ ಮುಂಬೈ ತೊರೆದಿದ್ದಾರೆ. ಇದರ ನಡುವೆ ಆನ್‌ಲೈನ್‌ನಲ್ಲಿ ಸೀರೆ ಮಾರಾಟ ಮಾಡ್ತಿರೋ ನಟಿ ಚಾರು ವಿಡಿಯೋ ಭಾರೀ ವೈರಲ್ ಆಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಾವು ಹೊಸ ಬ್ಯುಸಿನೆಸ್ ಶುರು ಮಾಡಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಸಿಂಗಾಪುರದಲ್ಲಿ ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರನ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಟ್ರು ಚಿರಂಜೀವಿ
ಸಂದರ್ಶನವೊಂದರಲ್ಲಿ ನಟಿ ಚಾರು ಅಸೋಪ ಮಾತನಾಡಿ, ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟ ಮಾಡ್ತಿರೋದು ನಿಜ. ಮುಂಬೈ ಬಿಟ್ಟು ನನ್ನ ಪೋಷಕರೊಂದಿಗೆ ನಾನು ಮತ್ತು ಮಗಳು ರಾಜಸ್ಥಾನದ ಬಿಕಾನೇರ್‌ಗೆ ವಾಸಿಸುತ್ತಿದ್ದೇನೆ ಎಂದಿದ್ದಾರೆ. ಮುಂಬೈನಲ್ಲಿ ವಾಸಿಸೋದು ಸುಲಭವಲ್ಲ. ಮನೆಯ ಬಾಡಿಗೆ ಮತ್ತು ಇತರೆ ಖರ್ಚು ಸೇರಿ 1 ಲಕ್ಷದಿಂದ 1.5 ಲಕ್ಷ ರೂ. ಆಗುತ್ತಿತ್ತು. ಅದನ್ನು ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಗಳನ್ನು ಒಂಟಿಯಾಗಿ ದಾದಿ ಜೊತೆ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಶೂಟಿಂಗ್ ಇದ್ದ ಸಂದರ್ಭದಲ್ಲಿ ಕಷ್ಟವಾಗುತ್ತಿತ್ತು. ಹಾಗಾಗಿ ನನ್ನೂರಿಗೆ ಬಂದು ಸ್ವಂತ ಬ್ಯುಸಿನೆಸ್ ಆರಂಭಿಸಿದೆ. ಇದು ಆತುರದಲ್ಲಿ ಕೈಗೊಂಡ ನಿರ್ಧಾರವಲ್ಲ ಎಂದಿದ್ದಾರೆ.
View this post on Instagram
ಅವರ ಆರ್ಥಿಕ ಸ್ಥಿತಿಯನ್ನು ಟ್ರೋಲ್ ಮಾಡಿದ್ದರ ಕುರಿತು ನಟಿ ಮಾತನಾಡಿ, ನೀವು ಹೊಸದನ್ನು ಶುರು ಮಾಡಿದಾಗ ಎಲ್ಲರೂ ಕಷ್ಟಪಡುತ್ತಾರೆ. ನನ್ನ ವಿಚಾರದಲ್ಲೂ ಅದೇ ಆಗಿದೆ. ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಈಗ ಎಲ್ಲವನ್ನು ನಿಭಾಯಿಸುತ್ತಿದ್ದೇನೆ. ನನ್ನ ಮಗುವಿನ ಕಡೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ, ಶೂಟಿಂಗ್ ಇದ್ದಾಗ ಮಾತ್ರ ಮುಂಬೈಗೆ ಬರೋದಾಗಿ ಚಾರು ಹೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ
ಅಂದಹಾಗೆ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್‌ರನ್ನು ಚಾರು ಅಸೋಪ ಮದುವೆಯಾಗಿದ್ದರು. ಈ ಜೋಡಿಗೆ ಜಿಯಾನಾ ಎಂಬ ಮಗಳಿದ್ದಾಳೆ. ಕೆಲ ಮನಸ್ತಾಪಗಳಿಂದ ರಾಜೀವ್ ಮತ್ತು ಚಾರು ಡಿವೋರ್ಸ್ ಪಡೆದರು.