ಮಾಜಿ ನೀಲಿತಾರೆ ಸನ್ನಿ ಲಿಯೋನ್ (Sunny Leone) ಕಾಸರಗೋಡಿನಲ್ಲಿ (Kasaragod) ಕಾಣಿಸಿಕೊಂಡಿದ್ದಾರೆ. ಇಲ್ಲಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ನಡೆಯುತ್ತಿರುವ ಹಿಂದಿ ಸಿನಿಮಾದ ಶೂಟಿಂಗ್ (Shooting) ನಲ್ಲಿ ಅವರು ಭಾಗಿಯಾಗಿದ್ದಾರೆ. ಬಿರುಬೀಸಿಲನ್ನು ಲೆಕ್ಕಿಸದೇ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ರಸ್ತೆಯಲ್ಲಿ ನಡೆಯುವ ದೃಶ್ಯದಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಶೇಣಿಯಲ್ಲಿ ಶೂಟಿಂಗ್ ನಡೆಯುವುದು ಹೊಸದೇನೂ ಅಲ್ಲ. ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಕಾಸರಗೋಡಿ ಈ ಸ್ಥಳ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸುಂದರ ಪ್ರದೇಶವಾಗಿದೆ.
ಶೂಟಿಂಗ್ ನೋಡುವುದಕ್ಕಾಗಿ ಅನೇಕರು ಆ ಸ್ಥಳಕ್ಕೆ ಆಗಮಿಸಿದ್ದರು. ಕೇರಳ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಸನ್ನಿ ಲಿಯೋನ್. ಈ ಹಿಂದೆ ಕೇರಳಕ್ಕೆ ಭೇಟಿ ನೀಡಿದಾಗ ಟ್ರಾಫಿಕ್ ಜಾಮ್ ಆಗಿ ಸನ್ನಿ ಲಿಯೋನ್ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು.
ಕನ್ನಡದಲ್ಲೂ ಸನ್ನಿ ನಟಿಸಿದ್ದಾರೆ. ಕನ್ನಡದ ನಾನಾ ಸಿನಿಮಾಗಳ ಹಾಡಿಗೂ ಸನ್ನಿ ಕುಣಿದಿದ್ದಾರೆ. ದಕ್ಷಿಣದ ಸಿನಿಮಾಗಳು ಅಂದರೆ ನನಗೆ ತುಂಬಾ ಇಷ್ಟ ಎಂದು ಈಗಾಗಲೇ ಅವರು ಹೇಳಿದ್ದಾರೆ.