ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ನಟಿಸಿದ್ದ ಸುನೈನಾ (Sunainaa) ಇದೀಗ ತಮಿಳಿನ ‘ರಾಕೆಟ್ ಡ್ರೈವರ್’ (Rocket Driver) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ, ನನಗೆ ಯಾರನ್ನಾದರೂ ಪ್ರೀತಿಸಲು ಮತ್ತು ಮದುವೆಯಾದಲು (Wedding) ಸಮಯವಿಲ್ಲ ಎಂದು ನಟಿ ಮಾತನಾಡಿದ್ದಾರೆ.
ಸಿನಿಮಾದಿಂದ ಸಿನಿಮಾಗೆ ಸದಾ ಹೊಸ ಪಾತ್ರಗಳ ಮೂಲಕ ಗಮನ ಸೆಳೆಯೋ ನಟಿ ಸುನೈನಾ ಈಗ ‘ರಾಕೆಟ್ ಡ್ರೈವರ್’ ಕಥೆ ಹೇಳೋಕೆ ಸಜ್ಜಾಗಿದ್ದಾರೆ. ಸಂದರ್ಶನವೊಂದರಲ್ಲಿ ಲವ್, ಮದುವೆ ಬಗ್ಗೆ ನಟಿ ಮಾತನಾಡಿ, ಯಾರನ್ನಾದರೂ ಪ್ರೀತಿಸಲು, ಮದುವೆಯಾಗಲು ನನಗೆ ಸಮಯವಿಲ್ಲ ಎಂದಿದ್ದಾರೆ. ನಾನು ಮೊದಲಿಂದಲೂ ಸಿನಿಮಾವನ್ನು ಮಾತ್ರ ಪ್ರೀತಿಸುತ್ತೇನೆ. ಅದನ್ನು ಬಿಟ್ಟು ಬೇರೇ ಯಾರನ್ನು ಪ್ರೀತಿಸುವುದಿಲ್ಲ. ಬಿಡುವಿನ ವೇಳೆಯಲ್ಲಿ ವೈಬ್‌ಸೈಟ್‌ನಲ್ಲಿ ನೋಡುತ್ತಲೇ ಇರುತ್ತೇನೆ. ಇದರಿಂದ ಹಲವು ವಿಷಯಗಳನ್ನು ಕಲಿಯುತ್ತಿದ್ದೇನೆ ಎಂದಿದ್ದಾರೆ ಸುನೈನಾ. ಇದನ್ನೂ ಓದಿ:ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ
ಇನ್ನೂ ಕೆಲವು ತಿಂಗಳುಗಳ ಹಿಂದೆ, ತನ್ನ ಬೆರಳಿಗೆ ವಜ್ರದ ಉಂಗುರದ ಫೋಟೋ ಹಾಕಿ ಲಾಕ್ ಎಂದು ಅಡಿಬರಹ ನೀಡಿದ್ದರು. ಇದರಿಂದ ಅವರ ಮದುವೆಯ ಬಗ್ಗೆ ಸುದ್ದಿ ಹಬ್ಬಿತ್ತು. ಖ್ಯಾತ ದುಬೈನ ಯೂಟ್ಯೂಬರ್ ಜೊತೆ ಮದುವೆ ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲಾ ವದಂತಿಗಳು ಸುಳ್ಳು ಎಂಬ ಸ್ಪಷ್ಟನೆ ಸಿಕ್ಕಿದೆ. ಈ ಮೂಲಕ ತಾವು ಸಿಂಗಲ್ ಎಂದು ನಟಿ ಕ್ಲ್ಯಾರಿಟಿ ಕೊಟ್ಟಿದ್ದಾರೆ.