ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ‘ಗಂಗೆ ಬಾರೆ ತುಂಗೆ ಬಾರೆ’ ನಟಿ

Public TV
1 Min Read
sunainaa

ನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾ ಮೂಲಕ ಪರಿಚಿತರಾದ ಸುನೈನಾ (Actress Sunainaa) ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗುಟ್ಟಾಗಿ ನಟಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಈ ಕುರಿತು ನಟಿ ಅಧಿಕೃತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮೃಣಾಲ್‌ಗೆ ಬೇಡಿಕೆ- ತಮಿಳಿನತ್ತ ‘ಸೀತಾರಾಮಂ’ ನಟಿ

sunainaaಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ಸುದ್ದಿ ವೈರಲ್ ಆಗ್ತಿದ್ದಂತೆ ಸುನೈನಾ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಿಶ್ಚಿತಾರ್ಥದ ಸುದ್ದಿ ನಿಜ ಎಂದು ಒಪ್ಪಿಕೊಂಡಿದ್ದಾರೆ. ಭಾವಿ ಪತಿ ಜೊತೆ ರಿಂಗ್ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿ, ತನಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಎಲ್ಲರಿಗೂ ಮುಂಚಿತವಾಗಿ ಧನ್ಯವಾದಗಳು ಎಂದಿದ್ದಾರೆ. ಆದರೆ ಭಾವಿ ಪತಿ ಜೊತೆಗಿನ ಫೋಟೋ ಆಗಲಿ ಯಾವುದೇ ವಿವರವನ್ನು ಸುನೈನಾ ಹಂಚಿಕೊಂಡಿಲ್ಲ. ಈ ವರ್ಷದ ಅಂತ್ಯದಲ್ಲಿ ಮದುವೆ ಜರುಗಲಿದೆ ಎನ್ನಲಾಗಿದೆ. ಇದನ್ನೂ ಓದಿ:ಬಾಲಿವುಡ್‌ಗೆ ನಟಿ- ಸ್ಟಾರ್ ನಟನ ಪುತ್ರನಿಗೆ ಶ್ರೀಲೀಲಾ ನಾಯಕಿ

2008ರಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾದರು.

Share This Article