ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರ ಸೋಮವಾರದಂದು (ಮೇ 29) 71ನೇ ಜನ್ಮದಿನವಾಗಿದ್ದು, ಪತ್ನಿ ಸುಮಲತಾ (Sumalatha) ಅವರು ಅಂಬಿ ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ನಟಿ-ಸಂಸದೆ ಸುಮಲತಾ ಮಾತನಾಡಿದ್ದಾರೆ.
Advertisement
ಸುಮಲತಾ ಅಂಬರೀಶ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮದುವೆ (Wedding) ಸಂಭ್ರಮ ಕಳೆಗಟ್ಟಿದೆ. ಅಭಿಷೇಕ್- ಅವಿವಾ (Aviva) ಸಾಕಷ್ಟು ವರ್ಷಗಳು ಪ್ರೀತಿಸಿ ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೇ ಎಂಗೇಜ್ಮೆಂಟ್ ಕೂಡ ಅದ್ದೂರಿಯಾಗಿ ನೆರವೇರಿತ್ತು. ಈಗ ಮದುವೆಗೆ ಕೌಂಟ್ಡೌನ್ ಶುರುವಾಗಿದೆ. ಇದನ್ನೂ ಓದಿ: ಅಂಬರೀಶ್ ಜನ್ಮದಿನಕ್ಕೆ ಸುಮಲತಾ ಅಂಬರೀಶ್ ಭಾವುಕ ಪತ್ರ
Advertisement
Advertisement
ಇನ್ನೇನು ಕೆಲವೇ ಕೆಲವು ದಿನಗಳು ಅಭಿಷೇಕ್ ಮದುವೆಗೆ ಬಾಕಿಯಿದೆ. ಜೂನ್ 5ಕ್ಕೆ ಅಭಿಷೇಕ್ ಮದುವೆ, ಜೂನ್ 7ಕ್ಕೆ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ವೇಳೆ, ನಾವೆಲ್ಲರೂ ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಮದುವೆ ತಯಾರಿ ಭರದಿಂದ ಸಾಗುತ್ತಿದೆ. ಮದುವೆಗೆ ಆಹ್ವಾನ ಮಾಡಿರುವ ಎಲ್ಲಾ ವ್ಯಕ್ತಿಗಳು ನನಗೆ ವಿಶೇಷ ಎಂದು ಸುಮಲತಾ ಮಾತನಾಡಿದ್ದಾರೆ.
Advertisement
ನರೇಂದ್ರ ಮೋದಿ ಅವರು ಬರುತ್ತಾರೋ ಇಲ್ಲವೋ ಈ ಬಗ್ಗೆ ಮಾಹಿತಿ ಇಲ್ಲ. ಆದರೆ ಬಹಳ ವಿಶೇಷವಾಗಿ ಮದುವೆ ಆಹ್ವಾನ ನೀಡಿದ್ವೀವಿ. ಇಂದು ಸಂಜೆ ಅಭಿಷೇಕ್- ಅವಿವಾ ಡ್ಯಾನ್ಸ್ ಮಾಡಿರುವ ಸರ್ಪ್ರೈಸ್ ವೀಡಿಯೋ ರಿಲೀಸ್ ಮಾಡುತ್ತೇವೆ ಎಂದು ಅಂಬಿ ಸಮಾಧಿ ಬಳಿ ಸುಮಲತಾ ಮಾತನಾಡಿದ್ದಾರೆ.