ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಹುಟ್ಟುಹಬ್ಬದ ದಿನ ಪತಿ ಅಂಬರೀಶ್ ಸ್ಮಾರಕಕ್ಕೆ ಸುಮಲತಾ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವರ್ಷದ ಹುಟ್ಟುಹಬ್ಬದಿಂದ ಹೊಸ ಅಧ್ಯಾಯ ಶುರುವಾಗಿದೆ ಎಂದು ಮಾತನಾಡಿದ್ದಾರೆ.
ಅಂಬಿ ಸಮಾಧಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯಿಸಿ, 60 ವರ್ಷ ಆದ್ಮೇಲೆ ಜೀವನ ಅಧ್ಯಾಮ ಮುಗಿದಂತೆ ಎಂದು ಹೇಳ್ತಾರೆ. ಆದರೆ ಇವತ್ತಿನಿಂದ ಹೊಸ ಚಾಪ್ಟರ್ ಆರಂಭ ಆಗುತ್ತೆ ಅಂತಾ ಎಲ್ಲರೂ ಹಾರೈಸುತ್ತಿದ್ದಾರೆ. ಅಂಬರೀಶ್ ಅವರು ಮಾಡಿರುವ ಒಳ್ಳೆಯ ಕೆಲಸಗಳು, ಅವರು ಸಂಪಾದಿಸಿದ ಪ್ರೀತಿ ಇವತ್ತು ನಮಗೆ ಹಾರೈಕೆಯಾಗಿ ಬರುತ್ತಿದೆ. ಇದನ್ನೂ ಓದಿ:ಸುದೀಪ್, ದರ್ಶನ್ ಸಂಧಾನದ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಈ ವರ್ಷ ನಮಗೆ ಸ್ಪೆಷಲ್ ವರ್ಷನೇ ನಮಗೆ, ಯಾಕೆಂದರೆ ನನ್ನ ಮಗನ ಮದುವೆ ಆಯಿತು, ಮನೆಗೆ ಸೊಸೆನೂ(Aviva) ಬಂದಿದ್ದಾಳೆ. ಹಾಗಾಗಿ ನಮ್ಮ ಬಾಳಲ್ಲಿ ಹೊಸ ಚಾಪ್ಟರ್ ಶುರುವಾಗಿದೆ ಎಂದು ಖುಷಿಯಿಂದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಸಖತ್ ಸ್ಪೆಷಲ್ ಎಂದಿದ್ದಾರೆ.
ಇದು ನಮ್ಮ ವೈಯಕ್ತಿಕ ಬದುಕಿನ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇನೆ. ಅವರು ಬೇರೇ ರೀತಿಯಲ್ಲಿ ಇರೋಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋ ಹಾಗೆ ಇರುತ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ, ಇದು ತೀರಾ ಪರ್ಸನಲ್ ವಿಚಾರ ಎಂದು ಸುದೀಪ್-ದರ್ಶನ್ ಸಂಧಾನದ ಬಗ್ಗೆ ಸುಮಲತಾ ರಿಯಾಕ್ಟ್ ಮಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]