ಯಶ್‌, ದರ್ಶನ್‌ ಪ್ರಚಾರಕ್ಕೆ ಬರುತ್ತಾರಾ? ಸುಮಲತಾ ಸ್ಪಷ್ಟನೆ

Public TV
2 Min Read
sumalatha

ಟಿ, ಸಂಸದೆ ಸುಮಲತಾ ಅವರು ಲೋಕಸಭೆ ಚುನಾವಣೆಯಲ್ಲಿ (Loksabha Election) ಮಂಡ್ಯದಿಂದ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಬಿಜೆಪಿಯಿಂದ ತಮಗೆ ಟಿಕೆಟ್ ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಕಳೆದ ಬಾರಿ ಸುಮಲತಾ ಪರವಾಗಿ ಯಶ್- ದರ್ಶನ್ ಪ್ರಚಾರ ಮಾಡಿದ್ದರು. ಜೋಡೆತ್ತುಗಳಾಗಿ ಸಾಥ್ ನೀಡಿದ್ದರು. ಈ ಬಾರಿ ದರ್ಶನ್, ಸುಮಲತಾ ಪರ ಪ್ರಚಾರಕ್ಕೆ ಬರೋದಾಗಿ ತಿಳಿಸಿದ್ದಾರೆ. ಯಶ್ (Yash)  ಕೂಡ ಸುಮಲತಾಗೆ ಪ್ರಚಾರಕ್ಕೆ ನೀಡುತ್ತಾರಾ ಎಂಬುದರ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

sumalatha

ಈ ವಿಚಾರವಗಿ ಮಾಧ್ಯಮದ ಬಳಿ ಸುಮಲತಾ (Sumalatha) ಮಾತನಾಡಿದ್ದಾರೆ. ಕಳೆದ ಬಾರಿ ನಾನು ನಿರ್ದಿಷ್ಟವಾಗಿ ಪ್ಲ್ಯಾನ್ ಯಾವುದೂ ಮಾಡಿರಲಿಲ್ಲ. ಇಂಡಿಪೆಂಡೆಂಟ್ ಆಗಿಯೇ ನಿಂತಿದ್ದೆ. ಈಗ ಪರಿಸ್ಥಿತಿ ಚೇಂಜ್ ಆಗಿದೆ. ನಾನು ಈ ಬಾರಿ ಒಂದು ಪಕ್ಷದಿಂದ ನಿಲ್ಲುತ್ತಿದ್ದೇನೆ. ಈ ಪಕ್ಷದಲ್ಲಿ ಲೀಡರ್ಸ್ ಕೂಡ ಇರುತ್ತಾರೆ. ಪ್ರಚಾರ, ಹೋರಾಟ ಯಾವುದೇ ಇರಲಿ ವಿಭಿನ್ನವಾಗಿರುತ್ತದೆ. ಈಗಲೂ ಎಲ್ಲರೂ ಸಪೋರ್ಟ್ ಮಾಡುತ್ತಾರೆ. ಆಗ ಆ ಇಬ್ಬರೂ ಸೂಪರ್ ಸ್ಟಾರ್ಸ್‌ಗಳು ಯಾವುದೇ ಸ್ವಾರ್ಥ ಇಲ್ಲದೇ, ಯಾವುದು ಎದುರು ನೋಡದೇನೆ ನನ್ನ ಪರ ನಿಂತಿದ್ದರಲ್ಲ ಅದು ಸಾಹಸ. ಪ್ರತಿ ಸಲ ನನ್ನ ಪರ ನಿಲ್ಲಿ ಎಂದು ಕೇಳೋದು ಸರಿನಾ? ದರ್ಶನ್ (Darshan) ಅವರಿಗೂ ಸಿನಿಮಾ ಕೆಲಸಗಳು ಇರುತ್ತವೆ. ಪ್ರತಿ ಸಲ ನಮ್ಮ ಜೊತೆ ಬನ್ನಿ ಎಂದು ಕರೆಯುವುದು ಸರಿ ಅಲ್ಲ. ಬರೋದು ಇದ್ದರೆ ನಾನು ಖಂಡಿತ ವೆಲ್‌ಕಮ್ ಮಾಡ್ತೀನಿ ಎಂದು ಸುಮಲತಾ ಮಾತನಾಡಿದ್ದಾರೆ. ಇದನ್ನೂ ಓದಿ:74 ಕೋಟಿ ಪಡೆದು ಬೇಗ ನಿರ್ಗಮಿಸಿದ್ದೇಕೆ ಗಾಯಕಿ ರಿಯಾನಾ?

darshan sumalatha ambaresshಇತ್ತೀಚೆಗೆ ಚುನಾವಣೆ ಪ್ರಚಾರಕ್ಕೆ ಹೋಗಲ್ಲ ಎಂದು ಯಶ್ ಹೇಳಿದ್ದಾರೆ. ಇದು ನಿಜವೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಸುಮಲತಾ ಉತ್ತರಿಸಿದ್ದಾರೆ. ಯಶ್ ಈ ಮಾತನ್ನು ಮಾಧ್ಯಮದ ಬಳಿ ಈಗ ಹೇಳಿರಬಹುದು. ನನ್ನ ಬಳಿ ಈ ಮೊದಲೇ ಈ ಬಗ್ಗೆ ಮಾತನಾಡಿದ್ದರು. ಚುನಾವಣೆ ಮುಗಿದ ಬಳಿಕ ಸಾಕಷ್ಟು ಬಾರಿ ಈ ವಿಚಾರ ಚರ್ಚೆಗೆ ಬಂದಿತ್ತು. ರಾಜಕಾರಣ ಎಂದರೆ ಇಷ್ಟು ಕಹಿ ಇರುತ್ತದೆಯೇ, ಇಷ್ಟೊಂದು ಟೀಕೆ ಇರುತ್ತದೆಯೇ ಎಂದು ಬೇಸರ ಮಾಡಿಕೊಂಡಿದ್ದರು. ನಿಮ್ಮ ಚುನಾವಣೆಯಲ್ಲಿ ಆ ಬಗ್ಗೆ ಗೊತ್ತಾಯ್ತು ಎಂದಿದ್ದರು. ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರು ಸಖತ್ ಬ್ಯುಸಿ ಆಗಿದ್ದಾರೆ. ಅವರಿಂದ ಮತ್ತೆ ಇದನ್ನು ನಿರೀಕ್ಷಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಮನೆ ಕುಟುಂಬದ ನಂಟು ಇಟ್ಟುಕೊಂಡು ಆಗ ಯಶ್ ಅವರೇ ಬಂದರು. ಕಳೆದ ಚುನಾವಣೆಯಲ್ಲಿ ನನ್ನ ಮನೆಯ ಮಕ್ಕಳು ತರ ಓಡಾಡಿದ್ದಾರೆ. ಆವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಈ ಬಾರಿ ಅವರು ಬರದಿದ್ದರೂ ನಾನು ಬೇಜಾರು ಮಾಡಿಕೊಳ್ಳಲ್ಲ ಎಂದು ಹೇಳಿಕೆ ನೀಡಿದರು.

Share This Article