ಬಹುಭಾಷಾ ನಟಿ, ಸುಮಲತಾ (Sumalatha Ambareesh) ಅವರಿಗೆ ಈ ವರ್ಷ ಸಖತ್ ಸ್ಪೆಷಲ್. 60ನೇ ವರ್ಷಕ್ಕೆ ಕಾಲಿಟ್ಟಿರುವ ಅಂಬರೀಶ್ ಪತ್ನಿ ಸುಮಲತಾ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸಾಕ್ಷಿಯಾಗಿದ್ದಾರೆ.
ಸುಮಲತಾ ಹುಟ್ಟುಹಬ್ಬವನ್ನು ಶನಿವಾರ (ಆಗಸ್ಟ್ 26) ರಾತ್ರಿಯೇ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಲಾಗಿದೆ. ಕನ್ನಡ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಎಲ್ಲರನ್ನೂ ಅಂಬರೀಷ್ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ:ಮುಂದಿನ ತಿಂಗಳು ಪತ್ನಿಗೆ ಡೆಲಿವರಿ ಡೇಟ್- 2ನೇ ಮಗುವಿನ ಬಗ್ಗೆ ಧ್ರುವ ಪ್ರತಿಕ್ರಿಯೆ
ಇದು 60ನೇ ವರ್ಷದ ಬರ್ತ್‌ಡೇ ಎಂಬ ಖುಷಿ ಒಂದು ಕಡೆ. ಅಭಿಷೇಕ್-ಅವಿವಾ ಬಿಡಪ (Aviva Bidapa) ಮದುವೆ ಬಳಿಕ ಸುಮಲತಾ ಅಂಬರೀಷ್ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಎಂಬ ಖುಷಿ ಇನ್ನೊಂದು ಕಡೆ. ಈ ಸಂಭ್ರಮದಲ್ಲಿ ಜೋರಾಗಿ ಸೆಲೆಬ್ರೇಟ್ ಮಾಡಲಾಗಿದೆ.
ಈ ಸಂಭ್ರಮದಲ್ಲಿ ಸುಮಲತಾ ಕುಟುಂಬದ ಜೊತೆ ರಾಕ್‌ಲೈನ್ ವೆಂಕಟೇಶ್, ಕಿಚ್ಚ ಸುದೀಪ್(Kichcha Sudeep), ದರ್ಶನ್(Darshan), ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ (Rishab Shetty) ದಂಪತಿ, ಪ್ರಮೋದ್ ಶೆಟ್ಟಿ, ಮದಗಜ ನಿರ್ದೇಶಕ ಮಹೇಶ್, ಮಾಲಾಶ್ರೀ ಕುಟುಂಬ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಿ ಶುಭಕೋರಿದ್ದಾರೆ.
ಬಹುಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾರಂಗದ ಜೊತೆ ರಾಜಕೀಯ ರಂಗದಲ್ಲಿ ಸುಮಲತಾ ಹೈಲೆಟ್ ಆಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]